ಹೊನ್ನಾಳಿ ತಾಲೂಕು ಯರೇಚಿಕ್ಕನಹಳ್ಳಿ ಗ್ರಾಮದಲ್ಲಿ ಇಂದು ತಳವಾರ್ ತಿಪ್ಪಣ್ಣ ಎಂಬ ವ್ಯಕ್ತಿಗೆ ಸೇರಿದ ಸುಮಾರು 4 ಎಕ್ಕರ್ ಜಮೀನಿನಲ್ಲಿ ಬೆಳೆದಿದ್ದ ಬತ್ತದಹುಲ್ಲನ್ನು ಒಂದು ವರ್ಷಕ್ಕೆ ಸಾಕಾಗುವಷ್ಟು ಸಂಗ್ರಹಿಸಿ ಬಣವೆ ಒಟ್ಟಿದರು, ಆ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಬಸ್ಮವಾಗಿರುವ ಘಟನೆ ಇಂದು ನಡೆದಿದೆ. ಈ ಸುದ್ದಿ ತಿಳಿದ ತಕ್ಷಣ ಕಂಗಾಲಾದ ರೈತನ ಮನೆಗೆ ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ ಎಸ್ ಪ್ರದೀಪ್ ಗೌಡ್ರುರವರು ಸ್ಥಳಕ್ಕೆ ಭೇಟಿ ನೀಡಿ ರೈತರಾದ ತಳವಾರ್ ತಿಪ್ಪಣ್ಣನವರಿಗೆ ಸಾಂತ್ವನ ಹೇಳುವುದರ
ಜೊತೆಗೆ ತಮ್ಮಿಂದ ಕೈಲಾದ 5000 ರೂಗಳನ್ನು ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದರು. ಈ ಸಂದರ್ಭದಲ್ಲಿ ಯರೇಚಿಕ್ಕನಹಳ್ಳಿ ಗ್ರಾಮಸ್ಥರು ಸಹಉಪಸ್ಥಿತಿಯಲ್ಲಿದ್ದರು.