ನ್ಯಾಮತಿ ತಾಲೂಕು ಗೋವಿನ ಕೋವಿ ಗ್ರಾಮದ ಶ್ರೀಹಾಲ ಸ್ವಾಮಿ ಮಠದಲ್ಲಿರುವ ಶ್ರೀ ಗುಳ್ಳಮ್ಮ ದೇವಿಗೆ ಪೂಜೆಯೊಂದುಗೆ ಹರಕೆ ಸಲ್ಲಿಸಲಾಯಿತು.
ಗೋವಿನ ಕೋವಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಬಿ ಎಚ್ ರುದ್ರೇಶ್ ಎನ್ನುವರು 2023 ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಡಿಜಿ ಶಾಂತನಗೌಡ್ರು ಶಾಸಕರಾದರೆ ಶ್ರೀ ಹಾಲಸ್ವಾಮಿ ಮಠದಲ್ಲಿರವ ಶ್ರೀ ಗುಳ್ಳಮ್ಮ ದೇವಿಗೆ ಹಾಗೂ ನರಸಿಂಹಸ್ವಾಮಿ ದೇವರಿಗೆ ದೀಡು ನಮಸ್ಕಾರ ಹಾಕುತ್ತೇನೆ ಎಂದು ಹರಕೆಯನ್ನು ಹೊತ್ತುಕೊಂಡಿರುವ ಹಿನ್ನೆಲೆಯಲ್ಲಿ ಅಮಾವಾಸ್ಯೆಯ ದಿವಸ ಶುಕ್ರವಾರದಂದು ಇಂದು ಪೂಜೆ ಸಲ್ಲಿಸಲಾಯಿತು. ಆ ಪೂಜೆಗೆ ಶಾಸಕರ ಡಿ ಜಿ ಶಾಂತನಗೌಡ್ರು ರವರ ಸೊಸೆಯಂದರಾದ ಶ್ರೀಮತಿ ಸೌಮ್ಯ ಪ್ರದೀಪ್ ಮತ್ತು ವಾಣಿ ಸುರೇಂದ್ರ ರವರು ಮಠಕ್ಕೆ ಭೇಟಿಕೊಟ್ಟು ಕಾರ್ಯಕರ್ತನ ಆಸೆಯಂತೆ ಶ್ರೀಗಳು ಮತ್ತು ಗುಳ್ಳಮ್ಮ ದೇವಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಠದ ಶ್ರೀಗಳು ಹಾಗೂ ಊರಿನ ಗ್ರಾಮಸ್ಥರು ಕಾಂಗ್ರೆಸ್ ಪಕ್ಷದ ಮುಖಂಡರು ಸಹ ಭಾಗಿಯಾಗಿದ್ದರು.