ನ್ಯಾಮತಿ : ನ್ಯಾಮತಿ ಪಟ್ಟಣವನ್ನು ಸುಂದರ ಪಟ್ಟಣವನ್ನಾಗಿಸ ಬೇಕೆಂಬುದು ನನ್ನ ಕನಸಾಗಿದ್ದು ಈ ಹಿನ್ನೆಲೆಯಲ್ಲಿ ನನ್ನ ಆಡಳಿತಾವಧಿಯಲ್ಲಿ ನ್ಯಾಮತಿ ಪಟ್ಟಣಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿದ್ದು, ಪ್ರಸ್ತುತ ನ್ಯಾಮತಿ ಪಟ್ಟಣದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ಪಟ್ಟಣದ ವಿವಿಧ ಭಾಗಗಳಲ್ಲಿ ಪ್ರಗತಿಯಲ್ಲಿರುವ ಕೋಟ್ಯಾಂತರ ರೂಪಾಯಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಿ ಅವರು ಮಾತನಾಡಿದರು.
ನ್ಯಾಮತಿ ಪಟ್ಟಣಕ್ಕೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಹಾಗೂ ಯುಜಿಡಿ ನಿರ್ಮಾಣ ಕಾಮಗಾರಿ ಸೇರಿ ಒಟ್ಟು 74.61 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೇ ಎಂದ ರೇಣುಕಾಚಾರ್ಯ ನಗರೋತ್ತಾನ ಯೋಜನೆಯಡಿ ನ್ಯಾಮತಿ ಪಟ್ಟಣದಲ್ಲಿ ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ ಎಂದರು.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ನ್ಯಾಮತಿ ಪಟ್ಟಣದಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೇ ಎಂದರು.
ನ್ಯಾಮತಿ ಪಟ್ಟಣದಲ್ಲಿ ಪ್ರವಾಸಿ ಮಂದಿರ ನಿರ್ಮಾಣ ಮಾಡ ಬೇಕೆಂಬ ಉದ್ದೇಶದಿಂದ ಪ್ರಸ್ತುತ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರವಾಸಿ ಮಂದಿರ ನಿರ್ಮಾಣ ಮಾಡಲಾಗುತ್ತಿದೇ ಎಂದ ರೇಣುಕಾಚಾರ್ಯ ಕೊಳಗೇರಿ ನಿವಾಸಿಗಳಿಗಾಗೀ 97 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೇ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳು ನನ್ನ ಎರಡು ಕಣ್ಣುಗಳು ಅವುಗಳ ಸಮಗ್ರ ಅಭಿವೃದ್ದಿ ಮಾಡುವುದು ನನ್ನ ಕರ್ತವ್ಯ ಈ ನಿಟ್ಟಿನಲ್ಲಿ ನನ್ನ ಆಡಳಿತಾವಧಿಯಲ್ಲಿ ನಾಲ್ಕು ಸಾವಿರದ ಐನೂರು ಕೋಟಿಗೂ ಹೆಚ್ಚು ಅನುದಾನವನ್ನು ತಂದು ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಿದ್ದು ಪ್ರಸ್ತುತ ಒಂದುವರೆ ಸಾವಿರ ಕೋಟಿಗೂ ಹೆಚ್ಚು ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೇ ಎಂದರು.
ಈ ವೇಳೆ ತಾ.ಪಂ.ಮಾಜಿ ಅಧ್ಯಕ್ಷ ಎಸ್.ಪಿ.ರವಿಕುಮಾರ್ ಮುಖಂಡರಾದ ಸಿ.ಕೆ.ರವಿಕುಮಾರ್, ಪ್ರವೀಣ್, ಕುಮಾರ್,ಬಿ.ಕರಿಬಸಪ್ಪ,ಗಿರೀಶ್, ರಾಜೇಶ್ವರಿ,ಸದಣ್ಣ ಸೇರಿದಂತೆ ಮತ್ತೀತತರರಿದ್ದರು.