ನ್ಯಾಮತಿ ಪಟ್ಟಣದಲ್ಲಿ ನನ್ನ ಜೀವ ನನ್ನ ಸ್ವಚ್ಛ ನಗರ ಕಾರ್ಯಕ್ರಮದ ಯೋಜನೆ ಅಡಿಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿ ವತಿಯಿಂದ ಸಾರ್ವಜನಿಕರಿಗೆ ಮರುಬಳಕೆ ಆಗುವಂತ ವಸ್ತುಗಳ ಕೇಂದ್ರವನ್ನು ನ್ಯಾಮತಿ ಪಟ್ಟಣದಲ್ಲಿರುವ ಸಂತೆ ಮೈದಾನದಲ್ಲಿ ತೆರೆಯಲಾಗಿತ್ತು. ಈ ಆರ್ ಆರ್ ಆರ್ ಕೇಂದ್ರಕ್ಕೆ ಸಾರ್ವಜನಿಕರು ಬಂದು ಪುಸ್ತಕ, ಎಲೆಕ್ಟ್ರಿಕಲ್ ವಸ್ತುಗಳು, ಆಟುಕೆ ಸಮಾನು, ಬೊಂಬೆಗಳು ಹಾಗೂ ಅಲಂಕಾರಿಕ ವಸ್ತುಗಳನ್ನ ಕೇಂದ್ರಕ್ಕೆ ಬಂದು ತಂದು ಕೊಟ್ಟುಂತಹ ಸಾರ್ವಜನಿಕರಿಗೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಗಣೇಶ್ ರಾವ್ ಪಿ ಯವರು ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು. ಪರಿಸರ ಪ್ರೇಮಿ ಅಂಪಣ್ಣ, ಪಟ್ಟಣ್ ಪಂಚಾಯಿತಿ ಆರೋಗ್ಯ ನಿರೀಕ್ಷಕರಾದ ಹರ್ಷವರ್ಧನ್, ಕಂದಾಯ ನಿರೀಕ್ಷಕ ಪ್ರವೀಣ್ ಹಿಮಾಯತ್ ಮನು ಮಂಜುನಾಥ್ ಶಿವು ಹನುಮಂತಪ್ಪ ವೀಣಾ ಮಂಜುಳಾ ಪ್ರಶಾಂತ್ ರಾಜಪ್ಪ ನಾಗರಾಜ್ ಇನ್ನು ಮುಂತಾದ ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.