2022 ನವಂಬರ್ ಮಾಹೆಯಿಂದ 2023 ಜನವರಿ ಮಾಹೆವರೆಗೂ ಅನೌಪಚಾರಿಕ ಪಡಿತರ ಪ್ರದೇಶಗಳಿಂದ ವಶಪಡಿಸಿಕೊಳ್ಳಲಾದ 182.23 ಕ್ವಿಂಟಾಲ್ ಅಕ್ಕಿ ಮತ್ತು 68 ಕೆಜಿ ರಾಗಿಯನ್ನು ಜೂನ್ 8 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ 2 ಎಪಿಎಂಸಿ ಆವರಣ ಇಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ.
ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಬಿಡ್ಡುದಾರರು ನಿಗಧಿತ ದಿನ, ಸ್ಥಳಕ್ಕೆ ಹಾಜರಾಗಲು ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.