ಮಾಯಕೊಂಡ ಗ್ರಾಮದ ಆರೋಪಿ ನಾಗರಾಜ ಮಾಡಿರುವ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ೨ ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಗೆ ಜೀವಿತಾವಧಿ ಶಿಕ್ಷೆ ವಿಧಿಸಿದ್ದಾರೆ.
ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ೨ ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಆರ್.ಎನ್ ಅವರು ಆರೋಪಿತ ನಾಗರಾಜ ತನ್ನ ಪತ್ನಿಯ ಶೀಲ ಶಂಕಿಸಿ ೧೯ ಏಪ್ರಿಲ್ ೨೦೧೮ ರಂದು ಬೆಳಗಿನ ಜಾವ ಪತ್ನಿ ಶಿಲ್ಪಾ ಮತ್ತು ೨ ವರ್ಷದ ಕೃತಿಕಾ ಎಂಬ ಮಗಳನ್ನು ಕೊಲೆ ಮಾಡಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಂದಿನ ತನಿಕಾಧಿಕಾರಿ ಗುರುಬಸವರಾಜ್ ತನಿಖೆ ಮಾಡಿ ಆರೋಪಿತನ ವಿರುದ್ಧ ದೋಷಾರೋಹಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜಯಪ್ಪ ಕೆ.ಜಿ ವಾದ ಮಂಡಿಸಿದ್ದರು.