ನ್ಯಾಮತಿ: ಪಟ್ಟಣದಲ್ಲಿ ನಗರೊತ್ತಾನ ೪ರ ಯೋಜನೆ ಅಡಿಯಲ್ಲಿ ಕೊಡಿ ಕೊಪ್ಪ ಶಾಲೆಯ ಹತ್ತಿರ ಸಿಮೆಂಟ್ ಕಾಂಕ್ರೀಟ್ ರಾಜಕಾಲವೆ( ಬಾಕ್ಸ್ ಚರಂಡಿ) ೬೨ ಲಕ್ಷ ರೂ ವೆಚ್ಚದ ನಿರ್ಮಾಣದ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕರಾದ ಡಿ ಜಿ ಶಾಂತನಗೌಡ್ರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ ಬಿ ಗಂಗಪ್ಪ, ನಗರ ಘಟಕದ ಅಧ್ಯಕ್ಷ ಲೋಕೇಶಪ್ಪ ಗುಂದೂರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಷಣ್ಮುಖಪ್ಪ, ಕರಿಬಸಪ್ಪ ಇನ್ನು ಮುಂತಾದ ಕಾಂಗ್ರೆಸ್ ಪಕ್ಷದ ಮುಖಂಡರು ಸಹ ಭಾಗಿಯಾಗಿದ್ದರು.