ನ್ಯಾಮತಿ :ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ನೂತನ ಅಧ್ಯಕ್ಷರಾದ ಗೋವಿಂದರಾಜರವರ ಅಧ್ಯಕ್ಷತೆಯಲ್ಲಿ ಪ್ರಥಮ ಸಾಮಾನ್ಯ ಸಭೆ ನಡೆಯಿತು. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ನಂತರ ಮಾತನಾಡಿದ ಅವರು ಸರ್ಕಾರದ ಆದೇಶದ ಅನ್ವಯ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಸುಮಾರು 20 . 52,780 ರೂ ಸರ್ಕಾರದಿಂದ ನಮ್ಮ ಪಂಚಾಯಿತಿಗೆ ಹಣ ಬಂದಿರುವ ಹಿನ್ನೆಲೆಯಲ್ಲಿ ಕ್ರಿಯಾಯೋಜನೆಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕುಡಿಯುವ ನೀರು, ಬೀದಿ ದೀಪ, ಚರಂಡಿ ಸ್ವಚ್ಛತೆಯ ಇನ್ನು ಮುಂತಾದ ಮೂಲ ಸೌಕರ್ಯಗಳ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ನೀಡಲಾಯಿತು ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡ ಪ್ರಕಾಶ್ ನಾಯ್ಕ ಮಾತನಾಡಿ ನಮ್ಮ ಮುಸ್ಯೇನಾಳ ಗ್ರಾಮದಲ್ಲಿ ಸುಮಾರು ಒಂದುವರೆ ವರ್ಷಗಳ ಹಿಂದೆ ನೀರು ಘಂಟಿ ನಿವೃತ್ತಿ ಹೊಂದಿದ್ದರೂ ಸಹ ಗ್ರಾಮದಲ್ಲಿ ಕುಡಿಯುವ ನೀರು ಬಿಡಲಿಕ್ಕೆ ನೀರುಗಂಟಿ ಇಲ್ಲ ಹಾಗಾಗಿ ಸುಮಾರು ಬಾರಿ ಇಇಒ ಮತ್ತು ಸಿಎಸ್ ರವರಿಗೆ ಮನವಿ ಪತ್ರ ಸಲ್ಲಿಸಿದರು ಇತ್ತ ಕಡೆ ತಲೆ ಹಾಕದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಂಥ ಬರಗಾಲ ಸಂದರ್ಭದಲ್ಲಿ ಗ್ರಾಮದಲ್ಲಿ ಪ್ರತಿಯೊಂದು ಮನೆಗೆ ದಿನನಿತ್ಯ ಕುಡಿಯಲಿಕ್ಕೆ ನೀರು ಬಿಡುವ ನೀರಿನ ಘಂಟಿ ಇಲ್ಲ ಅನ್ನುವುದಾದರೆ ನೀರು ಬಿಡುವವರು ಯಾರು ಎಂದು ಗ್ರಾಮದಲ್ಲಿ ಸಮಸ್ಯೆ ಉಲ್ಬಣಿಸಿದೆ ಹಾಗಾಗಿ ತಾಲೂಕ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡಲೇ ಒಬ್ಬ ನೀರು ಗಂಟಿಯನ್ನ ಕೂಡಲೇ ನೇಮಕ ಮಾಡಬೇಕು ಎಂದು ಸದಸ್ಯರು ಸೇರಿದಂತೆ ಮುಸ್ಯೇನಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸದಸ್ಯರುಗಳಾದ ಪ್ರವೀಣ್ ಪಿ ಆರ್, ನಾಗೇಶ್ ನಾಯ್ಕ ,ನಟರಾಜಪ್ಪ, ಮಾಜಿ ಅಧ್ಯಕ್ಷರಾದ ಜಯಶ್ರೀ, ಅನಿತಾ, ಪ್ರೀತಿ ಎಂ ಕೆ, ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಸಹ ಇದ್ದರು