ನ್ಯಾಮತಿ: ತಾಲೂಕಿನ ಸೌಳಂಗಭಾಗದ ಹಲವಾರು ಹಳ್ಳಿಗಳಲ್ಲಿನ ಸೇರಿದಂತೆ ಫಲವನಹಳ್ಳಿ,ಗಂಜಿನಹಳ್ಳಿ,ಕೊಡತಾಳು ಮಾದಾಪುರ ಗ್ರಾಮಗಳ ರೈತರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಗುರವಾರ ಬೆಳಗಿನ ಜಾವ ಗಂಡು ಚಿರತೆ ಬೋನಿಗೆ ಬಿದ್ದಿದೆ. ಮಾದಾಪುರ ಗ್ರಾಮದ ಹೊರವಲಯದ ಜಮೀನುಗಳು ಮತ್ತು ಗುಡ್ಡದ ಭಾಗಗಳಲ್ಲಿ ಹೋಡಾಡುತ್ತಿದ್ದ ಚಿರತೆ ರೈತರ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು. ಕಳೆದ ಎರಡು ದಿನಗಳ ಹಿಂದೆ ಮಾದಾಪುರ ಗ್ರಾಮದ ರೈತನ ಕುರಿಯನ್ನು ಹೆಳೆದುಕೊಂಡು ಹೋಗಿ ಕುರಿಯ ಅರ್ದಭಾದ ದೇಹವನ್ನು ಭಕ್ಷೀಸಿ ಸ್ವಲ್ಪ ದೂರದಲ್ಲಿ ಬಿಟ್ಟು ಹೋಗಿರುವ ಘಟನೆ ನಡೆದಿತ್ತು.
ಕುರಿ ಮಾಲೀಕ ಗ್ರಾಮಸ್ಥರೊಂದಿಗೆ ನನ್ನ ಕುರಿ ಕಳ್ಳತನವಾಗಿ ಎಂದು ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಂದಿನ ದಿನ ಮಳೆಯಾದ ಕಾರಣ ಆ ಭಾಗದಲ್ಲಿ ರೈತರು ಜಮೀನುಗಳಿಗೆ ಹೋದಾಗ ಚಿರತೆಯ ಹೆಜ್ಜೆಯ ಗುರುತು ಮತ್ತು ಕುರಿಯ ದೇಹದ ಎಳೆದುಕೊಂಡು ಹೋಗಿರುವ ರಕ್ತದ ಕಲೆಯ ಗುರುತು ತಿಳಿಸಿದಾಗ ಕುರಿ ಮಾಲೀಕ ಸಂಭಂದಿ ಸಿದ್ದೇಶ್ ಅವರು ಅರಣ್ಯ ಇಲಾಖೆಗೆ ಪೋನ್ ಕರೆ ಮೂಲಕ ನಮ್ಮ ಜಮೀನುಗಳಲ್ಲಿ ಚಿರತೆಯ ಜೆಜ್ಜೆ ಗುರುತು ಕಾಣಿಸಿ ಕೊಂಡಿದೆ ಎಂದು ತಿಳಿಸಿದಾಗ ತಕ್ಷಣ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯಲು ಎರಡು ಮೂರು ಕಡೆ ಬೋನ್‍ಗಳನ್ನು ಇಟ್ಟಿದ್ದು ಒಂದು ಬೋನಿನಲ್ಲಿ ಕುರಿ ಅರ್ಧ ದೇಹದ ಮಾಂಸವನ್ನು ಬಿಟ್ಟುಹೊಗಿದ್ದನ್ನು ಬೋನಿನಲ್ಲಿಡುತ್ತಾರೆ ಅದರ ವಾಸನೆ ಸುಮಾರು 6 ವರ್ಷದ ಗಂಡು ಚಿರತೆ ಭೋನಿಗೆ ಬಿದ್ದ ಘಟನೆ ನಡೆದಿದೆ.
ಕೊಡತಾಳ ಮತ್ತು ಮಾಧಾಪುರ ಗ್ರಾಮಸ್ಥರ ಸಹಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ ತುಂಬಾ ಸಹಕಾರಿಯಾತು, ಅರಣ್ಯ ಇಲಾಖೆಯವರು ಚಿರತೆಯನ್ನು ಪಶು ಇಲಾಖೆಯ ವೈಧ್ಯರಿಂದ ತಪಾಸಣೆಗೊಳಿಸಿ ನಂತರ ಶಿವಮೊಗ್ಗದ ಬಳಿ ತ್ಯಾವರೆಕೊಪ್ಪದ ಹುಲಿ-ಸಿಂಹ ಧಾಮಕ್ಕೆ ಬಿಡಲಾಯಿತು ಎಂದು ಅರಣ್ಯ ಇಲಾಖೆ ಸಹಾಯಕ ನಿದೇರ್ಶಕ ಬರ್ಕತ್‍ಲಿ ತಿಳಿಸಿದರು ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಕೃಷ್ಣಮೂರ್ತಿ,ನಿಜಲಿಂಗಪ್ಪ ಮಾಧಾಪುರ,ಕೊಡತಾಳ ಗ್ರಾಮಸ್ಥರು ಇದ್ದರು.