ನ್ಯಾಮತಿ: ಗೋವಿನಕೋವಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಶ್ರಾವಣ ಮಾಸದ ಗೌರಿ ಅಮಾವಾಸ್ಯೆ ಪೂಜಾ ಕಾರ್ಯಕ್ರಮ ಸೆ.೧೪ರಂದು ಪೂಜೆ ೬ಗಂಟೆಯಿAದ ಆರಂಭವಾಗಲಿದೆ. ಶಿವಯೋಗಿ ಮಹಾಲಿಂಗ ಹಾಲಾಸ್ವಾಮಿಜಿ ಅವರ ನೇತೃತ್ವದಲ್ಲಿ ಆ.೧೬ರಿಂದ ಒಂದು ತಿಂಗಳು ನಿರಂತರವಾಗಿ ಗುರುಗಳ ತ್ರಿಕಾಲ ಇಷ್ಷಲಿಂಗ ಪೂಜಾನುಷ್ಠಾನ, ಕರ್ತೃ ಗದ್ದುಗೆಗಳಿಗೆ ಹಾಗೂ ಗುಳ್ಯಮ್ಮದೇವಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಪ್ರಸಾದ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹಾಲಸ್ವಾಮಿ ಸೇವಾ ಸಮಿತಿ ಕಾರ್ಯದರ್ಶಿ ವಿ.ಹೆಚ್ ರುದ್ರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.೧೪ರಂದು ಗುಳ್ಳಮ್ಮದೇವಿಗೆ ಸಂಕಲ್ಪ ಪೂಜೆ, ಬಿಲ್ವಾರ್ಚನೆ, ಮಹಾಮಂಗಳಾರತಿ, ಸುಮಂಗಲಿಯರಿಗೆ ಉಡಿ ತುಂಬುವುದು ಹಾಗೂ ದೇವಿಗೆ ಎಡೆ ಹಾಕಿದ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಹಾಲಸ್ವಾಮಿ ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್, ಪಾಲಾಕ್ಷಪ್ಪಗೌಡ, ಅಧ್ಯಕ್ಷ ಎಸ್.ಇ ರಮೇಶ್ ಇದ್ದರು.