ನ್ಯಾಮತಿ: ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗ್ರಾಮ ದೇವತೆ ಅಮ್ಮನ ಕೇಲು ದೇವರ ಮೆರವಣಿಗೆಯ ಮೂಲಕ ಬುಧವಾರ ಗ್ರಾಮದ ಗಡಿಯಲ್ಲಿ ವಿಸರ್ಜನೆ ಮಾಡಿದರು. ಉತ್ಸವ ಮೂರ್ತಿಗಳಾದ ಶ್ರೀ ಆಂಜನೇಯ ಸ್ವಾಮಿ, ಬಸವೇಶ್ವರ ಸ್ವಾಮಿ, ಭೂತಪ್ಪ ಮತ್ತು ಮರಿಯಮ್ಮ, ದುರ್ಗಮ್ಮ ದೇವರ ಸಮ್ಮುಖದಲ್ಲಿ ಮಂಗಳವಾದ್ಯಗಳೊAದಿಗೆ ಮೆರವಣಿಗೆ ನಡೆಸಲಾಯಿತು. ಉತ್ಸವದ ಕುರಿತು ಗ್ರಾಮದ ಮುಖಂಡ ಪರಮೇಶಪ್ಪ ಮಾತನಾಡಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಬ್ಬವನ್ನು ಆಚರಿಸಿ ಗ್ರಾಮದಲ್ಲಿ ಮಳೆ ಬೆಳೆ ಸಮೃದ್ಧಿಯಾಗಿ ಬರಲೆಂದು ಶ್ರಾವಣ ಮಾಸದ ಮೊದಲನೆಯ ಸೋಮವಾರ ಬಸವೇಶ್ವರ ದೇವಸ್ಥಾನದಲ್ಲಿ ದೇವತೆಯನ್ನು ಪ್ರತಿಷ್ಠಾಪಿಸಿ ಮೂರು ವಾರಗಳಿಂದ ಪೂಜಾ ಕೈಂ ಕರ್ಯದೊಂದಿಗೆ ನೆರವೇರಿಸಿ ಪ್ರತಿ ಶ್ರಾವಣ ಬುಧವಾರ ಸಂಜೆ ಭಜನೆ, ಪುರಾಣ ನಡೆಸಿ ಕೊನೆಯ ದಿನ ವಿಶೇಷ ಪೂಜೆ ನೈವೇದ್ಯ ಮಾಡಿ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡುವುದರೊಂದಿಗೆ ಗ್ರಾಮದ ಗಡಿಯಲ್ಲಿ ದೇವತೆಯನ್ನು ವಿಸರ್ಜನೆ ಮಾಡಿ ಪುನ ಬಂದು ಗ್ರಾಮದ ಆಂಜನೇಯ ಸ್ವಾಮಿಗೆ ನಮಸ್ಕರಿಸಿ ತೀರ್ಥ ತೆಗೆದುಕೊಂಡು ಹೋಗುವುದು ಪ್ರತಿತಿಯಾಗಿದೆ ಎಂದು ತಿಳಿಸಿದರು. ಊರಿನ ಗ್ರಾಮಸ್ಥರು ಮಹಿಳೆಯರು ಮತ್ತು ಪುರುಷ ಸೇರಿದಂತೆ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *