ನ್ಯಾಮತಿ: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ತಾಲೂಕು ಆಡಳಿತದಿಂದ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ
೧೦೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ ಸಂವಿಧಾನ ಪೀಠಿಕೆಯನ್ನು ಪ್ರತಿಜ್ಞಾವಿಧಿಯೂಂದಿಗೆ ಹೇಳಿದರು. ಶಾಸಕ ಡಿ ಜಿ ಶಾಂತನಗೌಡ್ರು ಸಭೆಯ ಅಧ್ಯಕ್ಷತೆ ಅನುಪಸ್ಥಿತಿಯಲ್ಲಿ ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪರವರು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಸಂವಿಧಾನ ಪೀಠಿಕೆ ಬೋಧಿಸಿದ ನಂತರ ಮಾತನಾಡಿ
ಸ್ವಾತಂತ್ರ‍್ಯ, ಸಮಾನತೆ ಮತ್ತು ಭ್ರಾತೃತ್ವದ ಉದಾತ್ತ ಚಿಂತನೆಗಳನ್ನು ಸಾರುವ ನಮ್ಮ ಸಂವಿಧಾನಕ್ಕೆ ಅದರದ್ದೇ ಆದಂತಹ ಇತಿಹಾಸವಿದೆ. ಸಂವಿಧಾನ ರಚಿಸಿದ ಡಾ; ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ನಮ್ಮ ದೇಶದ ಸಂವಿಧಾನಕ್ಕೆ ಪ್ರತಿಯೊಬ್ಬರೂ ತಲೆಬಾಗಿ ಕಾನೂನಿಗೆ ಗೌರವ ಕೊಡುವುದರೊಂದಿಗೆ ಸರ್ವರು ಸಮಾನತೆಯೊಂದಿಗೆ ಬದುಕಿದಾಗ ಡಾ, ಬಿ ಆರ್ ಅಂಬೇಡ್ಕರ್ ಅವರ ಕನಸನ್ನ ನನಸು ಮಾಡಬೇಕಾಗಿದೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಪೊಲೀಸ ಇನ್ಸ್ಪೆಕ್ಟರ್ ರವಿ ಎನ್ ಎಸ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳ ಗಣೇಶರಾವ್ ಪಿ, ದೇವರಾಜ್ ಅರಸ್ ಹಿಂದುಳಿದ ವರ್ಗದ ಅಧಿಕಾರಿ ಮೃತ್ಯುಂಜಯ, ಹಾಸ್ಟೆಲ್ ಸೂಪರ್ಡೆಂಟ್ ಸೀಮಾ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕುಮಾರ್ ಬಾರ್ಕಿ, ತಾಲೂಕು ಮಟ್ಟದ ಅಧಿಕಾರಿ ವರ್ಗದವರು ಹಾಗೂ ಉಪನ್ಯಾಸಕರು ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಿರೂಪಣೆ ಗಂಗಾಧರಪ್ಪ ನವಲಿ ಶಿಕ್ಷಕರು ನಡೆಸಿಕೊಟ್ಟರು. ನಾಡಗೀತೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು ಶ್ರೀ ಸಂಗಪ್ಪ.
ಸAವಿಧಾನ ಪೀಠಿಕೆ ವಾಚನ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಮತಿ,

Leave a Reply

Your email address will not be published. Required fields are marked *