ನ್ಯಾಮತಿ: ತಾಲೂಕು ಬಿದರಹಳ್ಳಿ ಕ್ಯಾತನ ಕೊಪ್ಪ ಕಣಿವೆ ಅರಣ್ಯ ಪ್ರದೇಶ ಬಳಿಯಲ್ಲಿ ಶಶಿಧರ್ ಜಿ ಆರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಇವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ ಇವರ ನೇತೃತ್ವದಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಸ್ಪ್ಲೆಂಡರ್ ಬೈಕ್ ನಲ್ಲಿ ಸಾಗಿಸುತ್ತಿದ್ದಾಗ ಚಿನ್ನಿಕಟ್ಟೆ ಗ್ರಾಮದ ತಮಿಳು ಕಾಲೋನಿಯ ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಿ,ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದ್ದು. ಬಾಕಿ ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಸ್ಪ್ಲೆಂಡರ್ ಬೈಕ್ ಮತ್ತು ಶ್ರೀಗಂಧದ ಮರದ ತುಂಡುಗಳನ್ನು ವಸಪಡಿಸಿಕೊಂಡು ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ ಎಂದು ಸದರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಚೇತನ್ ಕೆ ಆರ್ ತಿಳಿಸಿದ್ದಾರೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಬರ್ಕತ್ ಅಲಿ, ಗಸ್ತು ಅರಣ್ಯ ಪಾಲಕರಾದ ನಿಂಗರಾಜ್, ಕೃಷ್ಣಮೂರ್ತಿ, ಅರಣ್ಯ ವೀಕ್ಷಕರಾದ ಪ್ರವೀಣ, ಭೀಮಪ್ಪ ಹಾಗೂ ವಾಹನ ಚಾಲಕರಾದ ಮೌನೇಶ್ ಸಹ ಭಾಗವಹಿಸಿದ್ದರು.