ನ್ಯಾಮತಿ: ಬರುವಾಗ ದಾರಿಯುದ್ದಕ್ಕೂ ಒಣಗಿರುವ ಬೆಳೆಗಳನ್ನು ನೋಡಿ ಮನಸ್ಸಿಗೆ ತುಂಬಾ ಬೇಸರವೆನಿಸಿತ್ತು, ಈ ದುಸ್ಥಿತಿ ಕಂಡು ನೇಗಿಲ ಹಿಡಿದು ಮುಗಿಲು ನೋಡುತ್ತ ಅಳುವ ರೈತನ ನೋಡಲ್ಲಿ ಎಂದೆನಿಸುತ್ತಿದೆ ಎಂದು ತರಳಬಾಳು ಜಗದ್ಗುರುಡಾ. ಶೀವಮೂರ್ತಿ ಶೀವಾಚಾರ್ಯ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಯರಗನಾಳ್ ಗ್ರಾಮದಲ್ಲಿ ಲಿಂ.ಶಿವಕುಮಾರ ಶೀವಾಚಾರ್ಯ ಮಹಾಸ್ವಾಮಿಗಳ ೩೧ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮದ ಭಕ್ತಿ ಸಮರ್ಪಣಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಬರ ಪರಿಸ್ಥಿತಿ ನೋಡಿ ಕುವೆಂಪು ಅವರು ರಚಿಸಿರುವ ರೈತ ಗೀತೆಯ ಹಾಡಿನ ಸಾಲುಗಳನ್ನು ಈ ಬರ ಪರಿಸ್ಥಿತಿಗೆ ಹೊಂದುವAತೆ ಹಾಡಬಹುದೇನೋ ಎಂದ ಅವರು,ಇಂತಹ ಸಂದಿಗ್ದ ಸಮಯದಲ್ಲೂ ಭಕ್ತ ಸಮರ್ಪಣಾ ಕಾರ್ಯಕ್ರಮಕ್ಕೆ ನೀವೆಲ್ಲರು ಸೇರಿರುವುದು ನೋಡಿದರೆ ನಿಮ್ಮಲ್ಲಿರುವ ಭಕ್ತಿ ಎಷ್ಟೇಂಬುದನ್ನು ಅಳೆಯಲು ಯಾರಿಂದಲ್ಲೂ ಸಾಧ್ಯವಿಲ್ಲ ಎಂದರು.
ಬೆಂಗಳೂರಿನಲ್ಲಿ ಹಲವಾರು ಪಕ್ಷಗಳು ಐ.ಎನ್.ಡಿ.ಐ.ಎ ಹೆಸರಿನಲ್ಲಿಒಟ್ಟಾಗಿ ಸೇರಿದ್ದರು, ಆದರೆ ಅದೇ ಕಾವೇರಿ ಸಮಸ್ಯೆ ಬಗೆ ಹರಿಸಲು ಇವರು ಒಟ್ಟಾಗಿ ಸೇರುವುದಿಲ್ಲ ಆದರೆ ತಮ್ಮ ರಾಜಕೀಯ ಸ್ವರ್ಥಕ್ಕೆ ಎಲ್ಲರೂ ಒಟ್ಟಾಗಿ ಸೇರುತ್ತಾರೆ ಎಂದು ಹೇಳಿದರು.
ಧರ್ಮ ಹಾಗೂ ಕಾನೂನು ಎರಡನ್ನು ಪಾಲಿಸಬೇಕು, ಅಧಿಕಾರಿಗಳು ಕಾನೂನು ಪಾಲಿಸಿದರೆ ರಾಜಕಾರಣಿಗಳು ಧರ್ಮ ಪಾಲಿಸಬೇಕು,ಧರ್ಮ ಪಾಲಿಸುವ ನೆಪದಲ್ಲಾದರೂ ಕಾವೇರಿ ಸೇರಿದಂತೆ ಇನ್ನೀತರ ಸಮಸ್ಯೆಯನ್ನು ಬಗೆಹರಿಸಬಹುದಿತ್ತು ಎಂದು ತಿಳಿಸಿದರು.
ಉದಯಸ್ಟಾಲಿನ್ಗೆ ತರಾಟೆಗೆ ; ಸನಾತಮ ಧರ್ಮದವನ್ನು ಅನೇಕ ರೋಗಗಳಿಗೆ ಹೋಲಿಸಿ ಮಾತನಾಡಿದ ತಮಿಳುನಾಡಿನ ಸಚಿವ ಉದಯಸ್ಟಾಲಿನ್ನನ್ನು ತರಾಟೆಗೆ ತೆಗೆದುಕೊಂಡ ಶ್ರೀಗಳು ಸನಾತನ ಧರ್ಮವನ್ನು ಟೀಕೆ ಮಾಡಿರುವ ಆ ಸಚಿವನಿಗೆ ಧರ್ಮದ ಅರ್ಥ ತಿಳಿದಿಲ್ಲ ಎಂದನ್ನಿಸುತ್ತಿದೆ, ಕೇವಲ ಪ್ರಚಾರ ಅಥವಾ ಇನ್ನೀತರ ಕಾರಣಗಳಿಗೆ ಧರ್ಮ ಅವಹೇಳನ ಯಾರು ಸಹಿಸುವುದಿಲ್ಲ ಎಂದರು.
ಯಾರೇ ಆಗಲಿ ಭಾರಾತ್ ಮಾತಾಕಿ ಜೈ ಎನ್ನುತ್ತಾರೆ ಹೊರತು ಇಂಡಿಯಾ ಕಿ ಜೈ ಅನ್ನುವುದಿಲ್ಲ ಹಾಗೂ ಭಾರತ ಸರ್ಕಾರ ಇದೆ, ಅಲ್ಲವೇ ಇಂಡಿಯಾ ಸರ್ಕಾರ ಯಾರಾದರೂ ಕರೆಯುತ್ತಾರ ಎಂದು ಪ್ರಶ್ನಿಸಿದರು.ಯಾವುದನ್ನು ವಿವಾದ ಮಾಡುವುದು ಸಲ್ಲದು ಎಂದು ತಿಳಿಸಿದರು.
ಇಡೀ ವಿಶ್ವದಲ್ಲೇ ಭಾರತೀಯ ಸಂಸ್ಕೃತಿ ಅತ್ಯಂರ ಶ್ರೀಮಂತವಾದುದ್ದು,ಎಲ್ಲರೂ ಸಹ ನಮ್ಮ ಸಂಸ್ಕೃತಿಯನ್ನೇ ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು, ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ವಿಚ್ಚೇದನ ಶೇ ೫೦ ರಷ್ಟು ನಡೆದರೆ ನಮ್ಮ ದೇಶದಲ್ಲಿ ಶೇ ೨ರಿಂದ ೩ ರಷ್ಟು ಮಾತ್ರ ಇದೆ ಎಂದರು.
ಮಕ್ಕಳು ಸಂಸ್ಕಾರವAತರಾಗಬೇಕಾದರೆ ಪಾಲಕರು ಮಕ್ಕಳ ಪ್ರತಿ ಹೆಜ್ಜೆಯನ್ನು ಗಮನಿಸಿ ಅವರು ತಪ್ಪು ದಾರಿಯಲ್ಲಿ ಹೋಗುತ್ತಿದ್ದರೆ ಅದನ್ನು ತಿದ್ದಿ ಸನ್ಮಾರ್ಗದಲ್ಲಿ ಹೋಗುವಂತೆ ನೀವು ತಿಳಿಸಬೇಕು,ಬಹುಮುಖ್ಯವಾಗಿ ನೀವು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
ಸಂಸದ ಜಿ.ಎಂ.ಸಿದ್ದೇಶ್ ಮಾತನಾಡಿ, ಮಳೆ ಇಲ್ಲದೆ ಇರುವುದರಿಂದ ರಾಜ್ಯದಲ್ಲಿ ವಿದ್ಯುತ್ ಕ್ಷಾಮವೂ ಎದುರಾಗಿದೆ,ಈ ಬಗ್ಗೆ ನಾನು ಈ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಮಾತನಾಡಿ ಮೋಡ ಬಿತ್ತನೆ ಮಾಡಿ ಎಂದು ಹೇಳಿದ್ದೆ,ಅದರೆ ಅದು ನೆರವೇರಲಿಲ್ಲ ಎಂದರು.
ಭಕ್ತಿ ಸಮರ್ಪಣೆ ಕಳೆದ ೨ -೨೬ ವರ್ಷಗಳಿಂದಲ್ಲೂ ನಿರಂತರವಾಗಿ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ನಡೆದುಕೊಂಡು ಬರುತ್ತಿದೆ, ಇದಕ್ಕೆ ಕಾರಣ ಭಕ್ತಿ ಎಂದರು. ಭಕ್ತಿ ಒಂದಿದ್ದರೆ ಸಂಸ್ಕಾರ ತಾನಾಗಿಯೇ ಬರುತ್ತದೆ ದೇವರಲ್ಲಿ,ಗುರುಗಳಲ್ಲಿ ತಂದೆತಾಯಿಯರಲ್ಲಿ ಭಕ್ತಿ ಮುಖ್ಯ ಎಂದರು.
ನAದಿಗುಡಿ ಬೃಹನ್ಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಸಿರಿಗೆರೆ ಶ್ರೀಮಠಕ್ಕೂ ಹಾಗೂ ನಂದಿಗುಡಿ ಬೃಹನ್ಮಠಕ್ಕೂ ಅವಿನಾವಭವ ಸಂಬAಧವನ್ನು ಉಳೀಸಿಕೊಮಡು ಬಂದಿದೆ ಹಾಗಾಗಿ ಗ್ರಾಮಗಳಲ್ಲೂ ಸಹ ಎಲ್ಲರು ಭ್ರಾತೃತ್ವ ಸಂಬAಧದಲ್ಲಿ ಸಹ ಜೀವನನಡೆಸಿದರೆ ಸಮಾರಸ್ಯ ಜೀವನ ಸಾಗಿಸುಬಹುದು ಆ ನಿಟ್ಟಿನಲ್ಲಿ ಎಲ್ಲರೂ ಸಾಗೋಣ ಎಂದರು.
ಶಾಸಕ ಡಿ.ಜಿ.ಶಾಂತನಗೌಡ,ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ,ಮಾಜಿ ಶಾಸಕ ಡಾ.ಗಂಗಪ್ಪ, ಸಾಧುವೀರಶೈವ ಸಮಾಜದ ರಾಜ್ಯಾಧ್ಯಕ್ಷ ಬಸವರಾಜಪ್ಪ,ಮಾತನಾಡಿದರು.ಮೆಗ್ಗಾನ್ ಆಸ್ಪತ್ರೆಯ ಸರ್ಜನ್ ಡಾ.ಪಿ.ಸಿದ್ದನಗೌಡ,ಸುಮತಿ ಜಯಪ್ಪ,ಡಾ.ಅವಿನಾಶ್ ಉಪನ್ಯಾಸ ನೀಡಿದರು.
ನ್ಯಾಮತಿ ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಜಿ.ಶಿವಪ್ಪ,ಹೊನ್ನಾಳಿ ಸಾಧು ವೀರಶೈವ ಸಮಾಜದ ಅಧ್ಯಕ್ಷ ಗದ್ದಿಗೇಶ್,ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಜಿ.ರಮೇಶ್,ನಿವೃತ್ತ ಶಿಕ್ಷಕ ನಾಗೇಂದ್ರಪ್ಪ,ಶಿವಾ ಬ್ಯಾಂಕ್ ಅಧ್ಯಕ್ಷ ಶೈಲೇಶ್, ಜಿ.ಪಂ. ಮಾಜಿ ಸದಸ್ಯ ಡಿ.ಜಿ.ವಿಶ್ವನಾಥ್,ಸಿಪಿಐ ರವಿ, ಮುಖಂಡರಾದ ಜಗದೀಶ್,ಹನುಮೆಗೌಡ್ರು,ರುದ್ರಗೌಡ,ಮಂಜಪ್ಪ,ಮಲ್ಲೇಶಪ್ಪ ಹಾಗೂ ಇತರರರು ಇದ್ದರು.