ನ್ಯಾಮತಿ: ತಾಲೂಕು ಗಂಗನಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನೂತನ ಸಂಘದ ಉದ್ಘಾಟನೆ ಸಮಾರಂಭ ಹಾಗೂ 2022 /23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಶಾಸಕ ಡಿ ಜಿ ಶಾಂತನಗೌಡ್ರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದ ಅವರು 123 ವರ್ಷಗಳ ಹಿಂದೆ ಇಂತಹ ಕೆಟ್ಟ ಬರಗಾಲ ಬಂದಿತ್ತು ಎಂದು ಹಿರಿಯರ ಬಾಯಿಯಿಂದ ಕೇಳಿದ್ದೆವು, ಆದರೆ ಈ ವರ್ಷ ಸಾರ್ವಜನಿಕರು ರೈತರು ಮಳೆ ಬಾರದೆ ಬೆಳೆ ಬತ್ತಿ ಹೋಗಿ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಅ 18 ನೇ ತಾರೀಖಿನಿಂದ 3, ಲಕ್ಷ ಎಕ್ಕರೆಗೆ ಅಡಿಕೆ ಭತ್ತ ಸೇರಿದಂತೆ ಸಾವಿರಾರು ಎಕರೆ ಜಮೀನಿಗೆ ತುಂಗಾ ಭದ್ರಾ ನಾಲೆಯಿಂದ ನೀರು ಬಿಡುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆಯೂ ಬಾರದೆ ಇದ್ದರೆ ನೀರನ್ನ ಬಿಡಲಿಕ್ಕೆ ಸಾಧ್ಯವಿಲ್ಲ ಎಂದು ತುಂಗಾ ಇಂಜಿನಿಯರು ಅತಂಕ ವ್ಯಕ್ತಪಡಿಸಿದ್ದಾರೆ.
ಆದರೆ ಇಂಥ ಪರಿಸ್ಥಿತಿ ನಾನು ಸೇರಿದಂತೆ ನಮ್ಮ ರೈತರು ಭಗವಂತನ ಆಶೀರ್ವಾದಿಂದ ಮಳೆ ಬಂದರೆ ಡ್ಯಾಮ್ ತುಂಬಿದರೆ ಮಾತ್ರ ರೈತರು ಮತ್ತು ಸಾರ್ವಜನಿಕರು ಬದುಕಬಹುದು ಎಂದು ದೇವರಲ್ಲಿ ಪ್ರಾರ್ಥಿಸಿದರು. ಹೊನ್ನಾಳಿ ನ್ಯಾಮತಿ ತಾಲೂಕುಗಳನ್ನ ಬರಪೀಡಿತ ತಾಲೂಕೆಂದು ಸರ್ಕಾÀರ ಘೋಷಣೆ ಮಾಡಿದೆ. ಆದರೆ ಬರಗಾಲ ಘೋಷಣೆ ಮಾಡುವುದು ಮಳೆಯ ಮಾಪನ (ಹವಮಾನ ) ಇಲಾಖೆಯವರು ಸಮೀಕ್ಷೆಯನ್ನು ನಡೆಸಿ ಬರಗಾಲ ಘೋಷಣೆ ಸರ್ಕಾರಕ್ಕೆ ವರದಿ ಸಲ್ಲಿಸಿದಾಗ ಅದನ್ನು ಆದರಿಸಿ ಸರ್ಕಾರ ಮಾಡುತ್ತದೆ ಎಂದು ಹೇಳಿದರು. ರಾಜ್ಯದ ದಕ್ಷಿಣ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ರೈತರು ಸಹಕಾರ ಸಂಘಗಳಲ್ಲಿ ಸಾಲವನ್ನ ಪಡೆದುಕೊಂಡು ಅಷ್ಟೇ ನಿಯತ್ತಾಗಿ ಸಾಲವನ್ನು ಕಟ್ಟುತ್ತಾರೆ. ಹಾಗಾಗಿ ಆ ಕಡೆ ಭಾಗದ ಸಹಕಾರ ಸಂಘಗಳು ಪೂಜ್ಯ ಭಾವನೆಯಿಂದ ಕಾಣುವ ಸ್ಥಿತಿ ಅಲ್ಲಿ ಉದ್ಭವವಾಗಿದೆ.
ಆದರೆ ನಮ್ಮ ಭಾಗದ ರೈತರು ಸಾಲವನ್ನು ತೆಗೆದುಕೊಂಡು ಪುನಃ ಮರುಪಾವತಿಸಬೇಕು ಎಂದು ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯರವರು ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಷಣ್ಮುಖಪ್ಪ ಮತ್ತು ಡಿಜಿ ವಿಶ್ವನಾಥ್ ಸೇರಿದಂತೆ ಸಹಕಾರ ಸಂಘಗಳನ್ನ ಉಳಿಸಿ ಬೆಳೆಸಿದಾಗ ಮಾತ್ರ ಸಹಕಾರ ಸಂಘಕ್ಕೆ ನಾಂದಿ ಹಾಡಬಹುದು ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಎಂ ಜಿ ಬಸವನಗೌಡ ವಹಿಸಿಕೊಂಡಿದ್ದರು. ಉಪಾಧ್ಯಕ್ಷ ಎಂಜಿ ಚಂದ್ರಪ,್ಪ ರವಿಕುಮಾರ್ ಎಜಿ, ಮಹಶ್ವೇರಪ್ಪ ಎಂ ಸಿ, ಶಾಂತಪ್ಪ ರೆಡ್ಡಿ, ಬಿಪಿ ಚನ್ನೇಶಪ್ಪ, ಮಮತಾ, ಸುಮಿತ್ರಮ್ಮ, ಮಹಮ್ಮದ್ ನಾಸಿg,ï ಸೇರಿದಂತೆ ಎಲ್ಲಾ ನಿರ್ದೇಶಕರುಗಳು ಸಿಡಿಒ ನವೀನ್ ಹಾಗೂ ಕ್ಷೇತ್ರಅಧಿಕಾರಿ ಸುರೇಶ್, ಮುಖ್ಯಾಧಿಕಾರಿ ಮಲ್ಲಿಕಾರ್ಜುನ್ ಜಿಆರ್, ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು ಮತ್ತು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.