ನ್ಯಾಮತಿ: ಪಟ್ಟಣ ಪಂಚಾಯಿತಿ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಇಂದು ಆಚರಿಸಲಾಯಿತು. ಪೌರಕಾರ್ಮಿಕ ದಿನಾಚರಣೆ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶ್ ರಾವ್ ಪಿ ನಂತರ ಮಾತನಾಡಿ ಮಾತನಾಡಿ ನಮ್ಮ ನ್ಯಾಮತಿ ಪಟ್ಟಣ ಪಂಚಾಯಿತಿಯಲ್ಲಿರು ೧೧ ಜನ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ನಿನ್ನೆ ಅಂದರೆ ಸೆ ೨೨ ಶುಕ್ರವಾರ ಬೆಳಗಿನಿಂದ ಸಂಜೆಯವರೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅವರುಗಳಿಗೆ ಆಯೋಜಿಸಲಾಗಿತ್ತು. ಕ್ರೀಡೆಯಲ್ಲಿ ಗೆದ್ದಂತ ವಿಜೇತರಿಗೆ ಬಹುಮಾನ ವಿತರಣೆ ಸಹ ಮಾಡಲಾಯಿತು. ಶನಿವಾರ ಬೆಳಗ್ಗೆ ಹುಬ್ಬಳ್ಳಿ ಹತ್ತಿರ ಶಿಗ್ಗಾವ ಬಳಿಯಲ್ಲಿರುವ ಅಗಡಿ ತೋಟಕ್ಕೆ ಪೌರಕಾರ್ಮಿಕರನ್ನು ಬಸ್ಸಿನಲ್ಲಿ ಕರೆದುಕೊಂಡು ಬಂದು ಪ್ರಕೃತಿಯ ಸೌಂದರ್ಯದ ಸೊಬಗಿನಲ್ಲಿ ಮ್ಯೂಸಿಕಲ್ ಚೇರ್, ಒಂಟಿ ಸವಾರಿ, ಟಾಂಗ ಸವಾರಿ, ಸಣ್ಣಪುಟ್ಟ ಕ್ರೀಡ ಚಟುವಟಿಕೆಗಳನ್ನು ಆಡಿಸಿ ಭದೇಶಿಯ ಆಹಾರ ಪದ್ಧತಿಗಳನ್ನು ಪೌರ ಕಾರ್ಮಿಕರು ಕುಟುಂಬ ಸಮೇತವಾಗಿ ಮಕ್ಕಳೊಂದಿಗೆ ಸವಿಯುವುದರೊಂದಿಗೆ ಸಂತೋಷದಿAದ ಹರ್ಷ ವ್ಯಕ್ತಪಡಿಸಿದರು.ಪಟ್ಟಣ ಪಂಚಾಯಿತಿ ಮುಕ್ಕಾಧಿಕಾರಿ ಸಿಬ್ಬಂದಿ ವರ್ಗ ಹಾಗೂ ೧೧ ಜನ ಪೌರಕಾರ್ಮಿಕರು ೩೬೫ ದಿನಗಳು ಕಾಲ ಧಣಿವರಿಯದೆ ಕೆಲಸ ಮಾಡಿದಂತ ಪೌರಕಾರ್ಮಿಕರಿಗೆ ಇಂಥ ವ್ಯವಸ್ಥೆ ಮಾಡಿದರೆ ಅವರ ಮನಸ್ಥಿತಿಗಳು ಕೂಡ ನವ ಚೈತನ್ಯಕ್ಕೆ ತಿರುಗಿ ಅವರು ಕೂಡ ಸಂತೋಷದಿAದ ಬದುಕಬೇಕೆಂಬ ಬಯಕೆಯಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಮುಖ್ಯಾಧಿಕಾರಿ ಗಣೇಶ್ ರಾವ್ ಪಿ ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಅವರ ಸಿಬ್ಬಂದಿ ವರ್ಗದವರು ಹಾಗೂ ಪೌರಕಾರ್ಮಿಕ ಕುಟುಂಬ ವರ್ಗದವರು ಸಹ ಭಾಗವಹಿಸಿದ್ದರು.