ನ್ಯಾಮತಿ: ತಾಲ್ಲೂಕಿನ ಗೃಹರಕ್ಷಕ ದಳದ ಪ್ಲಟೂನ್‍ಕಮಾಂಡರ್ ಮತ್ತು ಘಟಕಾಧಿಕಾರಿ ಎಂ. ರಾಘವೇಂದ್ರ ಅವರಿಗೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವÀ ಪಿ.ಪರಮೇಶ್ವರ ಅವರು ಮುಖ್ಯಮಂತ್ರಿಯವರ ಚಿನ್ನದ ಪದಕ ನೀಡಿ ಗೌರವಿಸಿದರು.
ರಾಘವೇಂದ್ರ ಅವರು ಗಣೇಶ ವಿಸರ್ಜನೆ ದುರಂತದಲ್ಲಿ ಮಡಿದ 15 ಮೃತದೇಹಗಳನ್ನು ಶೋಧಿಸುವಲ್ಲಿ ಪ್ರಮುಖ ಪಾತ್ರ, ವಾಹನ ಅಪಘಾತದಲ್ಲಿ ಸೇತುವೆಯ ಕೆಳಗಡೆ ಬಿದ್ದವರನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದು, ರಾಜ್ಯ ವಿಧಾನಸಭೆ ಹಾಗೂ ಇತರ ರಾಜ್ಯ ಚುನಾವಣಾ ಕರ್ತವ್ಯಗಳಿಗೆ ಗೃಹರಕ್ಷಕರನ್ನು ನೇಮಿಸಲು ಶ್ರಮಿಸಿರುವುದು, ಕೇಂದ್ರಕಚೇರಿಯಲ್ಲಿ ನಡೆದ ಚಿತ್ರಗ್ರಹಣ ಮತ್ತುಕಿರುಚಿತ್ರ ಕಾರ್ಯಾಗಾರಕ್ಕೆ ಹಾಜರಾಗಿ ತರಬೇತಿಯನ್ನು ಪಡೆದಿರುತ್ತಾರೆ.
ಈಜಲು ಹೋಗಿ ಮೃತಪಟ್ಟ ಬಾಲಕನ ದೇಹವನ್ನು ಹೊರತೆಗೆದಿರುವುದು, ವಾಹನ ಸವಾರರ ಮೃತದೇಹಗಳನ್ನು ನೀರಿನಲ್ಲಿ ಇಳಿದು 2 ದಿನ ಶೋಧಿಸಿ ಹೊರತೆಗೆದು, ಕ್ರೇನ್ ಮೂಲಕ ನೀರಿನಿಂದ ವಾಹನ ಹೊರತೆಗೆದಿರುವುದು. ಕೋವಿಡ್ ಸಮಯದಲ್ಲಿಜನರಲ್ಲಿಜಾಗೃತಿ ಮೂಡಿಸಿರುವುದು.ಗೃಹರಕ್ಷಕ ಕಚೇರಿಗೆ ಗ್ರಾಮ ಪಂಚಾಯಿತಿಯಿಂದ ಖಾಲಿ ನಿವೇಶನ ಪಡೆದು ಇ-ಸ್ವತ್ತು ಪಡೆದಿರುವುದು, ನಾಗರೀಕ ಬಂದೂಕು ತರಬೇತಿ ಪಡೆದಿರುವುದನ್ನು ಪರಿಗಣಿಸಿ, ಈ ಬಾರಿ ದಾವಣಗೆರೆ ಜಿಲ್ಲೆಯಲ್ಲಿ ನನ್ನನ್ನು ಪರಿಗಣಿಸಿ ಸರ್ಕಾರ ಮುಖ್ಯಮಂತ್ರಿಯವರ ಚಿನ್ನದ ಪದಕ ನೀಡಿ ಗೌರವಿಸಿದೆ ಎಂದು ಎಂ.ರಾಘವೇಂದ್ರ ದೂರವಾಣಿ ಮೂಲಕ ‘ಉದಯವಾಣಿ’Âಯೊಂದಿಗೆ ಸಂತಸ ಹಂಚಿಕೊಂಡರು.

Leave a Reply

Your email address will not be published. Required fields are marked *