ಹುಣಸಘಟ್ಟ: ಜನತಾದರ್ಶನ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು ಇಂದು ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ನಡೆಯುತ್ತಿದ್ದು ಇದು ರಾಜ್ಯದಲ್ಲಿಯೇ ಮೊಟ್ಟ ಮೊದಲ ಕಾರ್ಯಕ್ರಮವಾದ ಹೆಗ್ಗಳಿಕೆ ಇದೆ ಎಂದು ಶಾಸಕ ಡಿಜಿ ಶಾಂತನಗೌಡ್ರು ಹೇಳಿದರು.
ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ ಜನತಾದರ್ಶನ ವಿನೂತನ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಜಮೀನಿನ ಸಾಗುವಳಿ, ಮನೆ ಹಕ್ಕು ಪತ್ರ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ 6 ಹಳ್ಳಿಯ ಸುಮಾರು 91 ಫಲಾನುಭವಿಗಳ ಕುಂದು ಕೊರತೆಗಳ ಮನವಿ ಪತ್ರ ಸ್ವೀಕರಿಸಿ ಕರಡಿ ಕ್ಯಾಂಪ್ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ನೆರವೇರಿಸಿ ಮಾತನಾಡಿದ ಅವರು ನಮ್ಮ ಸರ್ಕಾರ ಮೊಟ್ಟ ಮೊದಲ ಬಾರಿಗೆ ಶಕ್ತಿ ಯೋಜನೆ ಜಾರಿಗೆ ತಂದು ತಾಯಿಂದಿರು ಸರ್ಕಾರಿ ಬಸ್ಸುಗಳಲ್ಲಿ ರಾಜ್ಯದ್ಯಂತ ಪ್ರಯಾಣಿಸುತ್ತಿದ್ದು ಇಂದಿಗೆ ಸುಮಾರು ನಾಲ್ಕು ತಿಂಗಳಲ್ಲಿ 2 ಕೋಟಿಗೂ ಅಧಿಕ ಮಹಿಳೆಯರು ಇದರ ಪ್ರಯೋಜನವನ್ನು ಸದುಪಯೋಗ ಪಡೆದುಕೊಂಡಿದ್ದಾರೆ. ಇನ್ನು 2ನೇ ಯೋಜನೆ ಗೃಹಜೋತಿ, 200 ಯೂನಿಟ್ ಉಚಿತ ವಿದ್ಯುತ್ ಜಾರಿಗೆ ತಂದಾಯ್ತು.3ನೇಯದು ಅನ್ನಭಾಗ್ಯ ಯೋಜನೆ. ಈಗ ಕೊಡುವ 5 ಕೆಜಿ ಅಕ್ಕಿಯನ್ನು ನಾವು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಅಕ್ಕಿಯ ಲಭ್ಯತೆ ಸಿಗದೇ ಇರುವುದರಿಂದ ತಸ್ಥಮಾನ ವಾಗಿ 1 ಕೆಜಿ ಗೆ 34 ರೂನಂತೆ ಅಂತೋದಯ ಹಾಗೂ ಬಿಪಿಎಲ್ ಕಾಡುದಾರರ ಅಕೌಂಟಿಗೆ ಹಣವನ್ನು ಸಂದಾಯ ಮಾಡಲಾಗಿದೆ. ಇನ್ನು ಮಹತ್ವ ಯೋಜನೆ ಗೃಹಲಕ್ಷ್ಮಿ ಯೋಜನೆ ಇದು ನಮಗೆ ಬಹಳ ಹೊರೆಯಾದರೂ ಸಹ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆಲ್ಲರಿಗೋ 2 ಸಾವಿರ ಹಣ ಹಾಕಲಾಗಿದೆ. ಹಣ ಬರದೇ ಇರುವವರು ಚಿಂತಿಸುವ ಅಗತ್ಯವಿಲ್ಲ. ಯಾರ್ಯಾರಿಗೆ ಹಣ ಬಂದಿಲ್ಲವೋ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಉಳಿದವರಿಗು ಹಣ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ವರ್ಷ 123 ವರ್ಷ ಇತಿಹಾಸದಲ್ಲಿ ಇಂತಹ 50 ದಿವಸ ಸತತ ಮಳೆ ಇಲ್ಲದ ಇತಿಹಾಸ. 123 ವರ್ಷ ನಮ್ಮ ತಾತ ಮುತ್ತಾತರ ಕಾಲದ ಹಿಂದಿತ್ತು. ಅಂತಹ ಬರಗಾಲ ಈ ವರ್ಷ ನಮ್ಮ ರಾಜ್ಯಕ್ಕೆ ಬಂದಿದೆ. ಯಾವಾಗ ಡ್ಯಾಮ್ ಗಳು ನೀರಿಲ್ಲದೆ ಒಣಗುತ್ತವೆ, ಕುಡಿಯುವ ನೀರಿಗೂ ಸಮಸ್ಯೆ, ಅವಳಿ ತಾಲೂಕಿನಲ್ಲಿ ಅಂಕಲ ಪಸಲು ಒಂದು ರೂಪಾಯದ್ದು ಇಲ್ಲ. ರೈತರು ಬೆಳೆಗಾಗಿ ಸಾಲ ಮಾಡಿಕೊಂಡು ಮನೆಯ ಹೆಣ್ಣು ಮಕ್ಕಳ ಬಂಗಾರವೆಲ್ಲ ಬ್ಯಾಂಕಿನಲ್ಲಿ ಇಡಲಾಗಿದೆ. ರೈತರ ಪರಿಸ್ಥಿತಿ ಬಿಗಡಾಯಿಸಿದೆ ತಾಲೂಕಿನ ಎಲ್ಲಾ ಅಧಿಕಾರಿಗಳು ಅಲರ್ಟ್ ಆಗಿ ಜನತಾದರ್ಶನದ ಕಾರ್ಯಕ್ರಮದಲ್ಲಿ ಜನರು ಏನೇನು ಸಮಸ್ಯೆಗಳಿಗೆ ಅರ್ಜಿ ಸಲ್ಲಿಸುತ್ತಾರೋ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಿ. ಒಂದು ವೇಳೆ ಜನರಿಂದ ಏನಾದರೂ ದೂರು ಬಂದರೆ ನಾನು ಸಹಿಸುವುದಿಲ್ಲ ಎಂದು ಖಡಕ್ಕಾಗಿ ಉತ್ತರಿಸಿದರು.
ಜನತಾದರ್ಶನ ಕಾರ್ಯಕ್ರಮಕ್ಕೆ ತಾಲೂಕಿನ ಮೂಲೆ ಹಳ್ಳಿ ಹುಣಸಘಟ್ಟ ಗ್ರಾಮ ಪಂಚಾಯಿತಿಯನ್ನು ಏಕೆ? ಆಯ್ಕೆ ಮಾಡಿ ಮಾಡಿಕೊಂಡಿದ್ದೇವೆ ಎಂದರೆ ಈ ಭಾಗದ ತ್ಯಾಗದ ಕಟ್ಟೆ ಗ್ರಾಮದಲ್ಲಿ ಎಷ್ಟೇ ಬೋರ್ ಗಳನ್ನು ಹೊಡೆಸಿದರು ಒಂದು ಹನಿ ನೀರು ಬೀಳುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಕೆರೆಕಟ್ಟೆಗಳು ನೀರಿಲ್ಲದೆ ಒಣಗಿವೆ ಕರಡಿ ಕ್ಯಾಂಪು ಗ್ರಾಮಕ್ಕೆ ಇದುವರೆಗೂ ಯಾವುದೇ ಬಸ್ ಸಂಚಾರವಿಲ್ಲ ಆ ಭಾಗದ ಜನರು ಇನ್ನೂ ಸಮಸ್ಯೆಗಳ ಸುಳಿಯಲ್ಲಿ ಬದುಕುತ್ತಿದ್ದಾರೆ ಹಟ್ಟಿಯಾಳು ಚೀಲಾಪುರ ಗ್ರಾಮಗಳು ಸಹ ಇದಕ್ಕೆ ಹೊರತಾಗಿಲ್ಲ ಎಂದರು.
ತಾಲೂಕು ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣನವರು ಪ್ರಸ್ತಾವಿಕವಾಗಿ ಮಾತನಾಡಿ ಮಧ್ಯವರ್ತಿಗಳ ನಿರ್ಮೂಲನೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವುದು ಮತ್ತು ಜನರ ಮನೆ ಬಾಗಿಲಿಗೆ ಆಡಳಿತ ಕರೆದುಕೊಂಡು ಹೋಗುವುದು ಈ ಜನತಾದರ್ಶನ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ದಂಡಾಧಿಕಾರಿ ಪಟ್ಟ ರಾಜೇಗೌಡರು ವಹಿಸಿದ್ದರು. ಕಾರ್ಯನಿರ್ವಣಾಧಿಕಾರಿ ರಾಘವೇಂದ್ರ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಂಜರಾಜು ಉಪತಾಸಿಲ್ದಾರ್ ಚಂದ್ರಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೃತಿ ವೀರೇಶ್, ಉಪಾಧ್ಯಕ್ಷ ರಹಮತ್ ಬೀ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶೀಲ ಗದ್ದಿಗೆಶ್ ಗ್ರಾಮಪಂ ಸದಸ್ಯರು ಸೇರಿದಂತೆ 6 ಹಳ್ಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು.