ಹೊನ್ನಾಳಿ: ಸೆ: 28 ತಾಲೂಕು ಚಿಕ್ಕಗೋಣಗೇರಿ ಗ್ರಾಮದ ಗ್ರಾಮದೇವತೆ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ// ವೀರೇಂದ್ರ ಹೆಗ್ಗಡೆಯವರು ದೇವಸ್ಥಾನ ಜೀರ್ಣೋದ್ಧಾರಕ್ಕೆ ಹಣದ ರೂಪದ ಪ್ರಸಾದ ಕಳಿಸಿದ್ದಾರೆ ಎಂದು ಸುದ್ದಿ ತಿಳಿದು ಯೋಜನಾಧಿಕಾರಿಯ ಸ್ವಾಗತಕ್ಕೆ ಕಮಿಟಿಯವರು ದೇವಸ್ಥಾನ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ತಾಲೂಕು ಯೋಜನಾಧಿಕಾರಿ ನವೀನ್ ಎಂ ದೀಪ ಬೆಳಗಿಸುವುದರ ಮೂಲಕ ಚೆಕ್ ವಿತರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಪೂಜ್ಯ ಡಾ// ವೀರೇಂದ್ರ ಹೆಗ್ಡೆಯವರು ಧರ್ಮದ ಕಾರ್ಯಕ್ಕೆ ಜಾತ್ಯಾತೀತವಾಗಿ ಹಿಂದೂ ಮುಸ್ಲಿಂ ಕ್ರೈಸ್ತ ಭೇದವಿಲ್ಲದೆ ಧರ್ಮದ ಕಾರ್ಯಕ್ಕೆ ಸದಾ ಬೆಂಬಲ ಕೊಡುತ್ತಾ ಬಂದಿದ್ದಾರೆ. ಶ್ರೀ ಗಂಗಾಪರಮೇಶ್ವರಿ ದೇವಸ್ಥಾನ ಕಮಿಟಿಯವರು ಶ್ರೀಗಳ ಬಳಿ ಬಂದು ಮನವಿ ಮೇರೆಗೆ ಪೂಜ್ಯರಿಂದ 1,50, 000ರೂ ದೇವಸ್ಥಾನಕ್ಕೆ ಪ್ರಸಾದ ರೂಪದಲ್ಲಿ ಕೊಟ್ಟಿದ್ದಾರೆ. ಧರ್ಮದ ಕಾರ್ಯ ಪೂರ್ಣಗೊಳ್ಳದಿದ್ದರೆ ಪೂಜ್ಯರನ್ನ ಪುನ ಭೇಟಿಯಾಗಬಹುದು ಎಂದು ತಿಳಿಸಿದರು. ಧರ್ಮಸ್ಥಳದ ಯೋಜನಾಧಿಕಾರಿ ನವೀನ್ ಎಂ ಅವರು 1 50,000 ರೂ ಮೊತ್ತವನ್ನು ದೇವಸ್ಥಾನ ಕಮಿಟಿಯವರಿಗೆ ಸಾರ್ವಜನಿಕ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ದೇವಸ್ಥಾನ ಕಮಿಟಿಯ ಕಾರ್ಯದರ್ಶಿ ಶಿವಮೂರ್ತಿ ಮಾತನಾಡಿ ಚಿಕ್ಕಗೋಣಗೇರಿ ಚಿಕ್ಕ ಗ್ರಾಮವಾದರೂ ಪ್ರತಿಯೊಂದು ಮನೆಯವರು ಕೊಟ್ಟಂತಹ ಹಣ 5 ಲಕ್ಷ ರೂಗಳು ಆಗಿತ್ತು. ಕೊಟ್ಟಂತಹ ಹಣದಿಂದ ಪ್ರಾರಂಭಗೊಂಡ ಕಟ್ಟಡ ಆರ್ ಸಿ ಸಿ ಆಗಿ ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಬಳಿ ಕಾಣಲಿಕ್ಕೆ ಕಮಿಟಿಯವರು ದಾಖಲೆ ಸಮೇತ ತೆರಳಿ ದೇವಸ್ಥಾನ ವಿಚಾರವನ್ನು ಅವರ ಬಳಿ ತಿಳಿಸಿದಾಗ ಅಂದು ನಮ್ಮ ಮನವಿಗೆ ತಕ್ಷಣ ಸ್ಪಂದಿಸಿದ ಪೂಜ್ಯರು ಇಂದು ತಮ್ಮ ಯೋಜನಾಧಿಕಾರಿಯವರನ್ನು ಕಳಿಸಿ ರೂ.1, 50,000ರೂ ಪ್ರಸಾದ ರೂಪದಲ್ಲಿ ಕೊಟ್ಟಂತಹ ಹಣ ದೇವಸ್ಥಾನಕ್ಕೆ ಸಂಜೀವಿನಿಯಾಗಿದೆ. ಹಾಗಾಗಿ ಪೂಜ್ಯರಿಗೆ ದೇವರು ಆಯಸ್ಸು, ಆರೋಗ್ಯ ಅಷ್ಟೈಶ್ವರ್ಯದೊಂದಿಗೆ ಇನ್ನಷ್ಟು ನೂರು ಕಾಲ ಬಾಳಲಿ ಎಂದು ನಮ್ಮ ಗ್ರಾಮಸ್ಥರು ಪರವಾಗಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯಲ್ಲಿ ಹಾಗೂ ಶ್ರೀ ಗಂಗಾಪರಮೇಶ್ವರಿ ದೇವಿಯ ಆಶೀರ್ವಾದ ಸದಾ ಪೂಜ್ಯರ ಮೇಲೆ ಇರಲಿ ಎಂದು ಹಾರೈಕೆಯ ನುಡಿಯನ್ನು ನುಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಸವರಾಜಪ್ಪ ವಿ ಕಾರ್ಯದರ್ಶಿ ಶಿವಮೂರ್ತಿ ಕೆ ಕೋಶಾಧಿಕಾರಿ ಹನುಮಂತಪ್ಪ ನಿರ್ದೇಶಕ ಚಂದ್ರಪ್ಪ ಎಚ್ ಸುರೇಶ್ ಹೊನ್ನಾಳಿ ಮೇಲ್ವಿಚಾರಕರಾದ ನೇತ್ರಾವತಿ ಜಿ ಗ್ರಾಮಸ್ಥರು ಸಹ ಉಪಸ್ಥಿತಿಯಲ್ಲಿದ್ದರು.