ನ್ಯಾಮತಿ: ಕರ್ನಾಟಕ ಪಬ್ಲಿಕ್ ಶಾಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೀರ್ತಿ ಬಿ.ಇ ವಿದ್ಯಾರ್ಥಿನಿ ದಾವಣಗೆರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದು ರಾಜ್ಯಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.ಇವರಿಗೆ ಪ್ರಾಂಶುಪಾಲ ವಿ.ಪಿ ಪೂರ್ಣಾನಂದ, ಉಪನ್ಯಾಸಕ ಎಚ್.ಆರ್ .ಗಂಗಾಧರ್ ,ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಗಂಗಾಧರ್ ನವಲೆ, ಎಸ್. ಡಿ .ಎಂ .ಸಿ ಅಧ್ಯಕ್ಷರು , ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು,ಗಳು ಹಾಗೂ ಉಪನ್ಯಾಸಕ ಸಿಬ್ಬಂದಿ ವರ್ಗದವರು ಹಾಗೂ ಕೆ.ಪಿ.ಎಸ್ ಸಂಸ್ಥೆಯ ಎಲ್ಲಾ ನೌಕರವರ್ಗದವರು ಅಭಿನಂದಿಸಿದ್ದಾರೆ.