ನ್ಯಾಮತಿ: ಜೀನಹಳ್ಳಿ ಶಾಲಾ-ಕಾಲೇಜುಗಳಲ್ಲಿ ಆಧುನಿಕತಂತ್ರಜ್ಞಾನ ಬಳಸಿ ಬೋಧನೆ ಮಾಡುವುದರಿಂದ ಕಲಿಕೆ ಸುಲಭವಾಗುತ್ತದೆಎಂದು ಗೋಪನಾಳು ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಮ.ಗು.ಮುರುಗೇಂದ್ರಯ್ಯ ಹೇಳಿದರು.
ತಾಲ್ಲೂಕಿನ ಜೀನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಭದ್ರಾವತಿ ತಾಲ್ಲೂಕು ಕಸಾಪ ದತ್ತಿ ದಿವಂಗತಈರಮ್ಮ ಮತ್ತು ವೀರಭದ್ರಪ್ಪ ವಿಶ್ವೇಶ್ವರಯ್ಯ ಸ್ಮರಣಾರ್ಥದತ್ತಿಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಮನುಷ್ಯ ಸತ್ತ ಮೇಲೂ ಸಹಾ ಅವನ ಹೆಸರು ಉಳಿಯುವಂತಹ ಕೆಲಸ ಮಾಡಬೇಕು, ಅದನ್ನು ವಿಶ್ವೇಶ್ವರಯ್ಯ ಮಾಡಿದ್ದಾರೆ.ಬೆರಳ ತುದಿಯಲ್ಲಿ ವಿಶ್ವವನ್ನೆ ನೋಡುವಂತಹ ಎಜುಕೇಡ್‍ತಂತ್ರಜ್ಞಾನವನ್ನು ಅವರ ಹೆಸರಿನ ಎಂಜಿನಿಯರಿಂಗ ಕಾಲೇಜು ಪರಿಚಯಿಸಿತು ಎಂದರು. ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಪ್ರಶ್ನಿಸದೆ ಒಪ್ಪಬಾರದು, ವಿದ್ಯಾರ್ಥಿಗಳು ವಿಶ್ರಾಂತಿ ಬಯಸದೆ ಸದಾಚಟುವಟಿಕೆಯಿಂದ ಇದ್ದು, ಏನಾನ್ನದರೂ ಸಾಧನೆ ಮಾಡುವಗುರಿಯನ್ನು ಹೊಂದಬೇಕು ಎಂದರು.
ನ್ಯಾಮತಿ ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಕಾರ್ಯಕ್ರಮ ಉದ್ಘಾಟಿಸಿ, ಎಲ್ಲಾ ಭಾಷೆಗಳನ್ನು ಗೌರವಿಸಬೇಕು ಆದರೆಕನ್ನಡ ಭಾಷೆಯನ್ನು ಆರಾಧಿಸಬೇಕು ಎಂದರು.
ಭದ್ರಾವತಿ ತಾಲ್ಲೂಕು ಕಸಾಪ ಅಧ್ಯಕ್ಷ ಕೋಡ್ಲುಯಜ್ಞಯ್ಯ ಅಧ್ಯಕ್ಷತೆ ವಹಿಸಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಒಬ್ಬ ವಿದ್ಯಾರ್ಥಿಗೆ ತಾವು ಇರುವತನಕ ಪ್ರತಿವರ್ಷ ಪ್ರೋತ್ಸಾಹಧನ ನೀಡುವುದಾಗಿ ತಿಳಿಸಿ, ವಿಶ್ವೇಶ್ವರಯ್ಯ ಅವರ ಭಾವಚಿತ್ರವನ್ನು ಶಾಲೆಗೆ ಕೊಡುಗೆಯಾಗಿದತ್ತಿದಾನಿ ಆರುಂಡಿಕೋಟೆಕರೆಗೌಡ್ರ ನಾಗರಾಜಪ್ಪ ತಿಳಿಸಿದರು.
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಭಾಜನರಾಗಿರುವ ಕೆ.ವಿ.ಬಸವರಾಜಅವರನ್ನು ಶಾಲೆಯ ವತಿಯಿಂದಗೌರವಿಸಲಾಯಿತು.
ನಿಕಟಪೂರ್ವ ಅಧ್ಯಕ್ಷಜಿ. ನಿಜಲಿಂಗಪ್ಪದತ್ತಿಕುರಿತುಮಾಹಿತಿ ನೀಡಿದರು.
ನಿವೃತ್ತಉಪನ್ಯಾಸಕ ಕೆ.ಬಸವರಾಜಪ್ಪ. ಎಸ್‍ಡಿಎಂಸಿ ಅಧ್ಯಕ್ಷ ಪಿ.ಡಿ.ರವಿಕುಮಾರ, ಭದ್ರಾವತಿ ಕಸಾಪÀ ತಿಪ್ಪೇಶಪ್ಪ, ಮಂಜುನಾಥ, ನ್ಯಾಮತಿ ಕಸಾಪ ಪದಾಧಿಕಾರಿಗಳಾದ ಎಸ್.ಜಿ.ಬಸವರಾಜಪ್ಪ, ಎಂ.ಲೋಕೇಶ್ವರಯ್ಯ, ಎಂ.ಎಸ್.ಜಗಧೀಶ, ಚಂದನಜಂಗ್ಲೀ, ದಾನಿಹಳ್ಳಿ ಪಾಲಾಕ್ಷಪ್ಪ, ಶಾಲೆಯ ಸಹಶಿಕ್ಷಕರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಎ.ಎಂ.ನಾಗರಾಜ ಸ್ವಾಗತಿಸಿದರು, ಸುರೇಶ ನಿರೂಪಿಸಿದರು,ಡಿ.ಎಸ್.ಮಂಜುನಾಥ ವಂದಿಸಿದರು.

Leave a Reply

Your email address will not be published. Required fields are marked *