ಹೊನ್ನಾಳಿ: ಸೆ. 29 ಪಟ್ಟಣದಲ್ಲಿರುವ ಭಾರತೀಯ ವಿದ್ಯಾ ಸಂಸ್ಥೆ ಅವರಣದಲ್ಲಿ
ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಮತ್ತು ಭಾರತೀಯ ವಿದ್ಯಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರುಗಳಿಗೆ ಮೌಲ್ಯ ಮತ್ತು ಕೌಶಲ್ಯ ತರಬೇತಿ ಕಾರ್ಯಗಾರವನ್ನು ನಡೆಸಲಾಯಿತು. ಸಸಿಗೆ ನೀರು ಉಣಿಸುವುದರ ಮೂಲಕ ಕಾರ್ಯಗಾರದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ಶ್ರೀಯುತ ಡಾ. ಕೃಷ್ಣ ಎಸ್ ಭಟ್
“ಡಾಕ್ಟರ್ ಬಿ ಸಿ ರಾಯ್” ಪ್ರಶಸ್ತಿ ಪುರಸ್ಕೃತರು ಮತ್ತು ಖ್ಯಾತ ಕುಟುಂಬ ವೈದ್ಯರು ಶಿವಮೊಗ್ಗ ಇವರು ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದರು.
ತರಬೇತಿಯಲ್ಲಿ ಭಾರತೀಯ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಅನಂದಕುಮಾರ್ ,
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರು ಶ್ರೀಮತಿ ಉಷಾಉಡುಪ ,
ಇನ್ನರ್ವಿಲ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಶ್ರೀಮತಿ ಯಶೋಧ ಶೇಖರ್,
ಸಂಸ್ಥೆಯ ನಿರ್ದೇಶಕರಾದ ಎಚ್ ಎಮ್ ಅರುಣ್ ಕುಮಾರ್, ಕಾರ್ಯಗಾರದಲ್ಲಿ ಭಾಗಿಯಾಗಿದ್ದರು.
ಸಲಹ ಸಮಿತಿಯ ಸದಸ್ಯರಾದ ಕೆ ವಿ ಪ್ರಸನ್ನ ಇವರು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು.
ಭಾರತೀಯ ವಿದ್ಯಾ ಸಂಸ್ಥೆ ಎಲ್ಲಾ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಸಹ ಇದ್ದರು.