ನ್ಯಾಮತಿ: ವಿನೋಬ ನಗರದ ನಿವಾಸಿ ಎಂ.ಆರ್.ರಂಜಿತಾ ಅವರು ಉತ್ತರ ಪ್ರದೇಶದ ಕಾನ್ಪುರ ಕೃಷಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದ ಅಂಗವಾಗಿ ನ್ಯಾಮತಿ ತಾಲ್ಲೂಕು ಕಸಾಪ ವತಿಯಿಂದ ಮಂಗಳವಾರ ಅವರ ಮನೆಯಲ್ಲಿ ಗೌರವಿಸಲಾಯಿತು.
ಎಂ.ಆರ್.ಮಮತಾ ಮತ್ತು ದಿ.ಎಂ.ಸಿ.ರಾಜಶೇಖರ ಪುತ್ರಿಯಾದ ರಂಜಿತಾ ಅವರು ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿರುವ ಚಂದ್ರಶೇಖರ ಅಜಾದ್ ಕೃಷಿ ಮತ್ತುತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ಕೀಟಶಾಸ್ತ್ರ ವಿಷಯದಲ್ಲಿ ಸಂಗ್ರಹಿಸಿದ ‘ಬೇಳೆಕಾಳುಗಳನ್ನು ಹಾನಿ ಮಾಡುª ಬೃಚಿಡ್‍ದುಂಬಿಯ ಪರಿಸರ ಸ್ನೇಹಿ ನಿರ್ವಹಣೆಗಾಗಿ ಸಾಂಪ್ರದಾಯಿಕ ಮತ್ತುಆಧುನಿಕ ತಂತ್ರಗಳ ತುಲನಾತ್ಮಕ ಮೌಲ್ಯಮಾಪನ’ ಕುರಿತು ಪ್ರಬಂಧ ಮಂಡನೆ ಮಾಡಿದ್ದರು. ಈ ಪದವಿಯ ಸಂಶೋಧನೆಗಾಗಿ ಭಾರತ ಸರ್ಕಾರದ ಪ್ರತಿಷ್ಠಿತ ವಿಜ್ಞಾನ ಮತ್ತುತಂತ್ರಜ್ಞಾನ ವಿಭಾUದ ಫೆಲೋಶಿಫ್ ಪಡೆದಿದ್ದರು.
ಈ ಸಲುವಾಗಿ ಅವರನ್ನು ಕಸಾಪದಿಂದ ಗೌರವಿಸಿ, ಆಜೀವ ಸದಸ್ಯತ್ವವನ್ನು ನೀಡಲಾಯಿತು. ಎಂದು ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ತಿಳಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವಅಧ್ಯಕ್ಷ ನಿಜಲಿಂಗಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗಧೀಶ, ಸದಸ್ಯರಾದಎನ್.ಬಿ. ರವೀಂದ್ರಚಾರ್,ದಾನಿಹಳ್ಳಿ ಪಾಲಾಕ್ಷಪ್ಪ, ಈ.ಸುಮಲತಾ, ಮಮತಾಇದ್ದರು.

Leave a Reply

Your email address will not be published. Required fields are marked *