ನ್ಯಾಮತಿ: ತಾಲೂಕ್ ಪಂಚಾಯಿತಿ ಸಭಾಂಗಣದಲ್ಲಿ ಇಂದು ನರೇಗಾ ಯೋಜನೆ ಅಡಿಯಲ್ಲಿ ನಿರ್ಮಿಸಿರುವ “ಕೂಸಿನ ಮನೆಗಳ ಆರೈಕೆದಾರರ” ಒಂದು ವಾರದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ನಿರ್ವಾಣಾಧಿಕಾರಿ ರಾಘವೇಂದ್ರರವರು ಮಕ್ಕಳ ಎತ್ತರ ಅಳತೆ ಮಾಪನ ಮಾಡುವುದರೊಂದಿಗೆ ಚಾಲನೆ ನೀಡಿದರು.
ಕೂಸಿನ ಮನೆಗಳ ಆರೈಕೆ ದಾರದ ಕುರಿತು ನಂತರ ಮಾತನಾಡಿದ ಅವರು ಇದೊಂದು ಹೊಸದಾದ ಕಾಯಿದೆ ನೆರೆಗಾ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಗ್ರಾಮದಲ್ಲಿ ವಾಸವಾಗಿರುವ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜಾಬ್ ಕಾರ್ಡ್ ಪಡೆದ ಕೂಲಿ ಕಾರ್ಮಿಕರ ಆರು ತಿಂಗಳಿಂದ ಮೂರು ವರ್ಷದ ಒಳಗಿನ ಮಕ್ಕಳ ಲಾಲನೆ ಪಾಲನೆ ಪೆÇೀಷಣೆ ಸುರಕ್ಷತೆ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ಕೂಸಿನ ಮನೆ ನಿರ್ವಣೆಗಾಗಿ ಆಯ್ದ ಎಲ್ಲಾ ಗ್ರಾಮ ಪಂಚಾಯಿತಿಗಳ ಆರೈಕೆ ದಾರರ ಎರಡನೇ ಹಂತದ 7 ದಿನಗಳ ತರಬೇತಿಯನ್ನು ನೀಡಲಾಯಿತು ಎಂದು ತಿಳಿಸಿದರು.ಸಿ ಡಿ ಪಿ ಓ ಮಹಾಂತಯ್ಯ ಸ್ವಾಮಿ ಪೂಜಾರ, ನರೇಗಾ ಯೋಜನೆ ನಿರ್ದೇಶಕ ಸಂಗಮೇಶ್, ಟಿಪಿಓ ಸಂತೋಷ್, ಶ್ವೇತ ಕೊಯಾಡಿನೇಟರ, ಮಹಿಳಾ ತರಬೇತಿದಾರರಾದ ಮಂಜುಳಾ ಎಸ್ ಜಿ, ತರಬೇತಿ ಪಡೆಯುತ್ತಿರುವ ಮಹಿಳೆಯರು ಸಹ ಉಪಸತಿಯಲ್ಲಿದ್ದರು.