ನ್ಯಾಮತಿ: ತಾಲೂಕ್ ತಹಸಿಲ್ದಾರ ಕಚೇರಿಯ ಸಭಾಂಗಣದಲ್ಲಿ ಬುಧವಾರ ಜನವರಿ 10 ರಂದು ಇಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ದಾವಣಗೆರೆ ವಿಭಾಗದ ಲೋಕಾಯುಕ್ತ ಪೆÇಲೀಸ್ ಅದೀಕ್ಷರಾದ ಎಂ ಎಸ್ ಕೌಲಾಪುರೆ ಅವರು ನ್ಯಾಮತಿ ತಾಲೂಕಿನ ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿದರು. ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿ ಲೋಕಾಯುಕ್ತ ಪೆÇಲೀಸ್ ಅಧೀಕ್ಷಕರಾದ ಎಂ ಎಸ್ ಕೌಲಾಪುರೆ ಅವರು ನಂತರ ಮಾತನಾಡಿ ಇಂದು ಐದು ಜನ ದೂರಿನ ಅರ್ಜಿ ಸಲ್ಲಿಸಿದ್ದು, ಒಂದು ಲೋಕಾಯುಕ್ತ ಕಚೇರಿ ಬೆಂಗಳೂರರವರಿಗೆ ದೂರಿನ ಅರ್ಜಿ ಸಲ್ಲಿಸಿದ್ದಾರೆ. ಕೆಲವೊಂದು ಸ್ಥಳದಲ್ಲೇ ಸಾರ್ವಜನಿಕರ ದೂರ ಇತ್ಯರ್ಥ ಗೊಳಿಸಲಾಯಿತು. ತದನಂತರ ಮೀಟಿಂಗಿಗೆ ಬಂದಂತ ಪ್ರತಿಯೊಂದು ಇಲಾಖೆ ವರ್ಗದ ಅಧಿಕಾರಿಗಳು ಐಡಿ ಕಾರ್ಡ್ ಧರಿಸದೆ ಸಭೆಗೆ ಬಂದಿದ್ದದ್ದನ್ನು ಕಂಡು ಗಮನಿಸಿದ ಲೋಕಾಯುಕ್ತರು ಕೇಳಿದ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬಾದರು. ಇನ್ನೊಂದು ಬಾರಿ ಸಭೆಯನ್ನು ಕರೆದಾಗ ಈ ರೀತಿ ಆಗಬಾರದೆಂದು ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದರು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳನ್ನು ನಿರ್ವಹಿಸಲು ಲಂಚಕ್ಕೆ ಬೇಡಿಕೆ, ಅಕ್ರಮ ಆಸ್ತಿ ಸಂಪಾದನೆ, ಅರ್ಜಿಗಳ ವಿಲವಾರಿ ಮಾಡುವಲ್ಲಿ ಅನಗತ್ಯ ವಿಳಂಬ, ಸರ್ಕಾರಿ ಹಣದ ದುರುಪಯೋಗ, ಕಳಪೆ ಕಾಮಗಾರಿ ಹಾಗೂ ಇತರೆ ಯಾವುದೇ ರೀತಿಯ ಭ್ರಷ್ಟಾಚಾರ ದೂರುಗಳಿದ್ದಲ್ಲಿ ಕರ್ನಾಟಕ ಲೋಕಾಯುಕ್ತ ಕಚೇರಿ ದಾವಣಗೆರೆಯವರಿಗೆ ಸಾರ್ವಜನಿಕರು ಬಂದು ದೂರನ್ನ ಸ್ವಯಂ ಪ್ರೇರಿತವಾಗಿ ಬಂದು ದಾಖಲಿಸಬಹುದು ಎಂದು ಸಾರ್ವಜನಿಕರಿಗೆ ತಿಳಿಸಿದರು. ಸಭೆಗೆ ತಡವಾಗಿ ಬಂದ ಹೊನ್ನಾಳಿಯ ಸರ್ವೇ ಇಲಾಖೆಯ ಸೂಪರವೈಸರ್ ಉದಯಶಂಕರವರಿಗೆ ಚಳಿ ಬಿಡಿಸಿದ ಘಟನೆ ನಡೆಯಿತು.ಸಂದರ್ಭದಲ್ಲಿ ಲೋಕಾಯುಕ್ತ ಕಚೇರಿ ಅಧಿಕಾರಿಗಳಾದ ಪಿ ಐ ಎಚ್ ಎಸ್ ರಸ್ತಾಪತಿ, ಪಿ ಐ ಪ್ರಭು, ಬಿ ಸುರೈನ, ನ್ಯಾಮತಿ ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪ, ಲೋಕಾಯುಕ್ತ ಸ್ಟಾಪ್ ಮಲ್ಲಿಕಾರ್ಜುನ್, ಧನರಾಜ್ ಮತ್ತು ತಾಲೂಕು ಮಟ್ಟದ ಅಧಿಕಾರಿ ವರ್ಗದವರು ಹಾಗೂ ಸಾರ್ವಜನಿಕರು ಸಭೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *