ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 2023-24 ಶೈಕ್ಷಣಿಕ ಸಾಲಿನ (ಜನವರಿ ಅವೃತ್ತಿ) ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ., ಬಿ.ಲಿಬ್. ಐ.ಎಸ್‌ಸಿ., ಬಿ.ಸಿ.ಎ., ಬಿ.ಬಿ.ಎ, ಬಿ.ಎಸ್.ಡಬ್ಲೂö್ಯ, ಎಂ.ಎ, ಎಂ.ಕಾA, ಎಂ.ಎ-ಎAಸಿ.ಜೆ., ಎಂ.ಲಿಬ್, ಐಎಸ್‌ಸಿ., ಎಂ.ಬಿ.ಎ, ಎಂ.ಎಸ್ಸಿ ಎಂ.ಸಿ.ಎ, ಎಂ.ಎಸ್.ಡಬ್ಲೂö್ಯ, ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ಮತ್ತು ಪಿಜಿ-ಡಿಪ್ಲೋಮ, ಡಿಪ್ಲೋಮ, ಸರ್ಫಿಕೇಟ್ ಕೋರ್ಸ್ಗಳಿಗೆ ಪ್ರವೇಶಾವಕಾಶ ಪ್ರಾರಂಭವಾಗಿದೆ.
  ಜ.9 ರಿಂದ ಪ್ರವೇಶಾವಕಾಶಗಳು ಪ್ರಾರಂಭವಾಗಿದ್ದು, ಎರಡು ಶೈಕ್ಷಣಿಕ ಕೋರ್ಸ್ಗಳನ್ನು ಏಕಕಾಲದಲ್ಲಿ ಒಂದು ಭೌತಿಕ ಕ್ರಮದಲ್ಲಿ ಮತ್ತೊಂದು ದೂರಶಿಕ್ಷಣ ಕ್ರಮದಲ್ಲಿ ಓದಲು ಅವಕಾಶವಿದೆ.
  ವಿದ್ಯಾರ್ಥಿಗಳು ವೆಬ್ ಸೈಟ್  www.ksoumysuru.ac.in  ಮೂಲಕ ಅರ್ಜಿಯನ್ನು ಭರ್ತಿ ಮಾಡಿ, ದಾವಣಗೆರೆ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಆನ್‌ಲೈನ್ ಮುಖಾಂತರ ಪ್ರವೇಶಾತಿ ಶುಲ್ಕವನ್ನು ಪಾವತಿಸಿ ಪ್ರವೇಶ  ಪಡೆಯಬಹುದು. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿನಿಯರಿಗೆ, ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ ಮತ್ತು ಆಟೋ, ಕ್ಯಾಪ್ ಚಾಲಕರು ಮತ್ತು ಅವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು. ಅಲ್ಲದೇ ಕೋವಿಡ್-19 ನಿಂದ ಮೃತಪಟ್ಟವರ ಮಕ್ಕಳಿಗೆ, ತೃತೀಯ ಲಿಂಗಿಗಳಿಗೆ, ದೃಷ್ಠಿಹೀನ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 8690544544, 8800335638 ಅಥವಾ ಮೊ.ನಂ 9844926125, 9916009318, 8095939359, 6363739884, 9008905457 ಸಂಪರ್ಕಿಸಲು ಅಥವಾ ಖುದ್ದಾಗಿ ಕ.ರಾ.ಮು.ವಿ. ಪ್ರಾದೇಶಿಕ ಕೇಂದ್ರ, ಜೆ.ಹೆಚ್.ಪಟೇಲ್ ಬಡಾವಣೆ, ಶಾಮನೂರು ಹಿಂಭಾಗ, ನಾಗನೂರು ರಸ್ತೆಯಲ್ಲಿರುವ ಕಚೇರಿಯನ್ನು ಸಂಪರ್ಕಿಸಲು ಕ.ರಾ.ಮು.ವಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಡಾ.ವಿಜಯ್ ಪ್ರಕಾಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *