ನ್ಯಾಮತಿ: ಪಟ್ಟಣದ ಪೊಲೀಸ್‍ಠಾಣೆ ವತಿಯಿಂದ ಭಾನುವಾರ ಹೆಲ್ಮೆಟ್‍ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ಪೊಲೀಸರು ಹೂವನ್ನು ನೀಡುವ ಮೂಲಕ ರಸ್ತೆ ನಿಯಮಗಳನ್ನು ಪಾಲಿಸುವಂತೆ ಮನವರಿಕೆ ಮಾಡಿದರು.
ರಸ್ತೆ ಸುರಕ್ಷತಾ ಸಪ್ತಾಹ-2024 ಆಚರಣೆ ಸಲುವಾಗಿ ಸಂಚಾರ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಲುಕಾರ್ಯಕ್ರಮ ಹಮ್ಮಿಕೊಂಡಿದ್ದು.ಚಾಲಕರಿಗೆಕುಡಿದು ವಾಹನ ಚಲಾಯಿಸಿದರೆ, ಅತಿವೇಗ ಚಾಲನೆ, ನಿಯಮ ಮೀರಿ ಹೆಚ್ಚು ಜನರನ್ನು ಬಸ್,ಆಟೋದಲ್ಲಿ ಪ್ರಯಾಣ, ಹೆಲ್ಮೆಟ್‍ಧರಿಸುವುದರಿಂದ ನೀವು ಮತ್ತು ನಿಮ್ಮಕುಟುಂಬದವರು ಉಳಿಯುತ್ತಾರೆ. ಸಂಚಾರ ನಿಯಮಉಲ್ಲಂಘನೆ ಮಾಡಿದರೆಕಠಿಣ ಕಾನೂನು ಕ್ರಮಇದೆಎಂಬುದನ್ನು ಸಾರ್ವಜನಿಕರಿಗೆ ಸಬ್‍ಇನ್ಸ್‍ಪೆಕ್ಟರ್‍ಎಂ.ಜೆ.ಚಂದ್ರು ಮನವರಿಕೆ ಮಾಡಿದರು.
ಹೆಡ್‍ಕಾನ್ಸ್‍ಸ್ಟೇಬಲ್ ಕೆ. ಮಂಜಪ್ಪ ಸಹಕರಿಸಿದರು.