ನ್ಯಾಮತಿ ಪೊಲೀಸ್ ಠಾಣೆ ವತಿಯಿಂದ ಮಂಗಳವಾರ ಜ,16 ರಂದು 2024ರ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯಕುಮಾರ್ ,ಎಂ ಸಂತೋಷರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದ್ವಿಚಕ್ರ ವಾಹನದಲ್ಲಿ ಕುಳಿತು ಸವಾರರು ಅತಿ ವೇಗವಾಗಿ ಚಾಲನೆ ಮಾಡಿದರೆ ಯಮರಾಜನು ತಮ್ಮ ಜೀವವನ್ನು ತೆಗೆದುಕೊಂಡು ಹೋಗುತ್ತಾನೆ ಎಂದು ಸಾರ್ವಜನಿಕರಿಗೆ ತಿಳುಪಡಿಸುವ ನಿಟ್ಟಿನಲ್ಲಿ ಜಾತದಲ್ಲಿ ಯಮರಾಜನ ರೂಪದ ವೇಷದಾರಿ ವ್ಯಕ್ತಿಯು ಸಾರ್ವಜನಿಕರ ಗಮನ ಸೆಳೆದಿದ್ದು ವಿಶೇಷವಾಗಿತ್ತು. ಪೋಲಿಸ್ ಇಲಾಖೆಯವರು ಪಟ್ಟಣದಲ್ಲಿ ಜಾತಾದ ಮೂಲಕ ತೆರಳಿ ಜಾಗೃತಿ ಮೂಡಿಸಿದರು.ಡಿ ವೈ ಎಸ್ ಪಿ ಪ್ರಶಾಂತ ಮುನ್ನೋಳಿ, ಪೊಲೀಸ್ ಇನ್ಸ್ಪೆಕ್ಟರ್ ಎನ್ಇ ರವಿ, ಸಬ್ ಇನ್ಸ್ಪೆಕ್ಟರ್ ಎಂ ಜೆ ಚಂದ್ರು ಹಾಗೂ ನ್ಯಾಮತಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಸಹ ಜಾತದಲ್ಲಿ ಪಾಲ್ಗೊಂಡಿದ್ದರು.