ನ್ಯಾಮತಿ: ತಾಲೂಕ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕ ಕಚೇರಿ ಸಭಾಂಗಣದಲ್ಲಿ ಇಂದು ಮಹಾಯೋಗಿ ಶ್ರೀ ವೇಮನರ 612ನೇ ಜಯಂತೋತ್ಸವ ಕಾರ್ಯಕ್ರಮ ಸರಳವಾಗಿ ಹಮ್ಮಿಕೊಳ್ಳಲಾಯಿತು.
ಶ್ರೀ ಮಹಾಯೋಗಿ ವೇಮನರ ಭಾವಚಿತ್ರಕ್ಕೆ ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪ ಮತ್ತು ಸಮಾಜದ ಮುಖಂಡರು ಸೇರಿದಂತೆ ಪುಷ್ಪ ನಮನ ಸಲ್ಲಿಸುವುದರ ಮುಖೇನ ಗೌರವ ನಮನ ಸಲ್ಲಿಸಿದರು.
ತಹಸಿಲ್ದಾರ್ ಎಚ್ ಬಿ, ಗೋವಿಂದಪ್ಪ ವೇಮನ ಕುರಿತು ಸಭೆಯನ್ನು ಉದ್ದೇಶಿಸಿ ನಂತರ ಮಾತನಾಡಿದ ಅವರು ಆಂಧ್ರಪ್ರದೇಶದ ಗುಂಟೂರ್ ಜಿಲ್ಲೆಯ ಕೊಂಡವೀಡು ಗ್ರಾಮದಲ್ಲಿ ಕ್ರಿಶ 1412ರಲ್ಲಿ ಜನಿಸಿದ ವೇಮನರು ಆ ಪ್ರದೇಶದಲ್ಲಿ ಆಳಿದ ಕುಮಾರಗಿರಿರೆಡ್ಡಿ ಎಂಬ ದೊರೆಯ ಪುತ್ರ ಅವರ ತಾಯಿ ಹೆಸರು ರಾಣಿ ಮಲ್ಲಮಾಂಬೆ ರಾಜನ ಮಗನಾಗಿದ್ದರೂ ಸಹ ವೇಮನರು ತಮ್ಮ ಜೀವಿತಕಾಲದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬದುಕದೆ ಬಟ್ಟೆ ಯಿಲ್ಲದೆ ಊರೂರು ತಿರುಗಿ ಭಿಕ್ಷಾನ್ನವನ್ನುಂಡು ಜನರ ನೋನಲಿವುಗಳನ್ನು ಕಣ್ಣಾರೆ ಕಂಡು ತೆಲುಗಿನಲ್ಲಿ ಯೋಗಿ ವೇಮನರು ಲೋಕ ಸಂಚಾರಿ ಯಾಗಿ ಜನರ ಬದುಕನ್ನು ಕಂಡು ಕವಿತೆಗಳನ್ನು ವೇಮನರು ರಚಿಸಿದ 15 ಸಾವಿರ ಪದ್ಯಗಳನ್ನು ಕಡಪಾದ ವೇಮನ ವಿಶ್ವವಿದ್ಯಾಲಯ ಪ್ರಕಟಿಸಿದೆ. ಅವರ ತತ್ವ ಆದರ್ಶಗಳನ್ನ ಒಂದು ಜಾತಿಗೆ ಸೀಮೆತವಾಗದೆ ಪ್ರತಿಯೊಬ್ಬರೂ ಪಾಲಿಸುವಂತಾಗಬೇಕು ಎಂದು ಹೇಳಿದರು. ಸಮಾಜದ ಅಧ್ಯಕ್ಷರು, ಗೌರವಾಧ್ಯಕ್ಷ ಸಾದೆವಪ್ಪ ರೆಡ್ಡಿ, ಕಾರ್ಯದರ್ಶಿ ಶುಭಾಷ್, ರತ್ನಮ್ಮ, ಪಾಪಕ್ಕ ,ಜಯಪುರ ರೆಡ್ಡಿ, ಹುಚ್ಚಪ್ಪ ರೆಡ್ಡಿ, ಸೇರಿದಂತೆ ಸಮಾಜದ ಬಾಂಧವರು ಹಾಗೂ ತಾಲೂಕ ಕಚೇರಿ ಸಿಬ್ಬಂದಿ ವರ್ಗದವರು ಸಹ ಉಪಸ್ಥಿತಿಯಲ್ಲಿದ್ದರು.