ನ್ಯಾಮತಿ ಜ 20 ಪಟ್ಟಣದಲ್ಲಿ ಶನಿವಾರ ಸಂಜೆ 4 ಗಂಟೆಗೆ ಸಮಯಕ್ಕೆ ರ್ಯಾಪಿಡ್ ಆಕ್ಷನ್ ಫೆÇೀರ್ಸ್ ಪಥ ಸಂಚಲನಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ ಉಮಾಪ್ರಶಾಂತ್ ಹಸಿರು ನಿಶಾನೆ ತೋರಿಸಿದರು.
ಶನಿವಾರ ಹೊನ್ನಾಳಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರ್ಯಾಪಿಡ್ ಆಕ್ಷನ್ ಫೆÇೀರ್ಸ್ ಪಥ ಸಂಚಲನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಾಜದಲ್ಲಿ ಅಶಾಂತಿ ಮೂಡಿಸುವ ಯಾರೇ ಆಗಲಿ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ನಮಗೆ ಮೊದಲು ಸಮಾಜದಲ್ಲಿ ಶಾಂತಿ ನೆಲೆಸಬೇಕು ಅದಕ್ಕಾಗಿ ನಮ್ಮ ಪೆÇಲೀಸರು ದಿನನಿತ್ಯದ 24 ಗಂಟೆ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಸಮಾಜದಲ್ಲಿ ಎಲ್ಲಿಯಾದರೂ ಪ್ರಕೃತಿ ವಿಕೋಪಗಳು ಅವಘಡ ಸಂಭವಿಸಿದ್ದ ಜಾಗದಲ್ಲಿ ಅಂತಹ ಕಡೆ ನಮ್ಮ ರ್ಯಾಪಿಡ್ ಆಕ್ಷನ್ ಫೆÇೀರ್ಸ್ ಸದಾ ಸನ್ನದ್ಧವಾಗಿರುತ್ತದೆ. ಅದರ ಹಿನ್ನೆಲೆಯಲ್ಲಿ ಹೊನ್ನಾಳಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನರ ರಕ್ಷಣೆಗಾಗಿ ಪಥ ಸಂಚಲನ ಮಾಡುವುದರ ಮೂಲಕ ಸಂದೇಶ ನೀಡುತ್ತಿದ್ದೇವೆ ಎಂದರು.
ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಆರ್ ಎ ಎಫ್ ಸುನಿಲ್ ಕುಮಾರ್, ಹೊನ್ನಾಳಿ ಪೆÇಲೀಸ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್, ಪಿಎಸ್ ಐ ವಿಜಯ್, ದೊಡ್ಡಬಸಪ್ಪ, ರಾಪಿಡ್ ಆಕ್ಷನ್ ಫೆÇೀರ್ಸ್ ನೂರಾರು ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *