ನ್ಯಾಮತಿ: ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿ ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಉದ್ಘಾಟನೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಯನ್ನು ಅವಳಿ ತಾಲೂಕಿನ ಶಾಸಕರು ಡಿ ಜಿ ಶಾಂತನಗೌಡ್ರು ಟೇಪ್ ಕತ್ತರಿಸುವ ಮುಖೇನ ಚಾಲನೆ ನೀಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮತದಾರ ಬಾಂಧವರಿಗೆ ಮೊದಲನೇದಾಗಿ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದರು. ಕಾರಣ ಇಷ್ಟೇ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರಗಳ ಹತ್ತಿರ ಅನುದಾನ ತೆಗೆದುಕೊಳ್ಳದೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 35 ಲಕ್ಷ ರೂ ವೆಚ್ಚದ ಗ್ರಾಮಸೌಧ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ನಾನು ಶಾಸಕರಾ ಅನುದಾನದಲ್ಲಿ ಈ ಕಟ್ಟಡಕ್ಕೆ ಅನುದಾನ ಹಾಕದಿದ್ದರೂ ಸಹ,
ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ಹಾಗೂ ಮಂದಿರ ಲೋಕಾರ್ಪಣೆ ದಿನದಂದು ನನ್ನ ಕೈಯಿಂದ ಕಟ್ಟಡ ಉದ್ಘಾಟನೆ ಮಾಡಿಸಿದ್ದು ಸಂತಸದ ತಂದಿದೆ. ಏಕೆಂದರೆ ಶ್ರೀರಾಮನು ತ್ರ್ಯೆತಾಯುಗದಲ್ಲಿ ಧರ್ಮದ ರೀತಿಯಲ್ಲಿ ನಡೆದಿದ್ದರು, ಈ ಸುದಿನದಂದು ಕಾರ್ಯಕ್ರಮಕ್ಕೆ ಕರೆದು ಗ್ರಾಮ ಪಂಚಾಯತಿ ನೂತನ ಕಟ್ಟಡವನ್ನು ಉದ್ಘಾಟಿಸಿದ್ದು ನನ್ನ ಸೌಭಾಗ್ಯ ದಿನ ಎಂದು ತಿಳಿಸಿ ಮಾತು ಮುಂದುವರಿಸಿ ಮುಂದಿನ ವರ್ಷ ಶ್ರೀ ರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷ ತುಂಬಿ 2ನೇ ವರ್ಷಕ್ಕೆ ಕಾಲಿಡುವ ದಿನದಂದು ಅವಳಿ ತಾಲೂಕಿನಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಗ್ರಾಮಸೌಧವನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರ್ಮಿಸಿ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಾಲೂಕ್ ನಿರ್ವಣಾಧಿಕಾರಿ ರಾಘವೇಂದ್ರ ಅವರಿಗೆ ತಾಕೀತು ಮಾಡಿದರು. ಅದಕ್ಕೆ ತಲೆಬಾಗಿದ ತಾಲೂಕಿನ ನಿರ್ವಣಾಧಿಕಾರಿ ಮಾತನಾಡಿ ನೀವೇ ಹೇಳಿದ ಹಾಗೆ ಉದ್ದೋಗ ಖಾತ್ರಿ ಯೋಜನೆ ಅಡಿಯಲ್ಲಿ 10 ಗ್ರಾಮಸೌಧವನ್ನು ನಿರ್ಮಿಸಿ ಕೊಡುತ್ತೇನೆ ಎಂದು ಶಾಸಕರಿಗೆ ಭರವಸೆ ನೀಡಿದರು.
ಸ್ವಾಗತ ಭಾಷಣವನ್ನು ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ ನಾಯ್ಕ್ ನಡೆಸಿಕೊಟ್ಟರು.
ಪ್ರಸ್ತಾವಿಕ ನುಡಿಯನ್ನು ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರವೀಣ್ ಗಂಜೀನಹಳ್ಳಿ ನಡೆಸಿದರು.
ಅಧ್ಯಕ್ಷತೆಯನ್ನು ಗೋವಿಂದರಾಜ್ ಎಂ ಸಿ ವಹಿಸಿಕೊಂಡಿದ್ದರು. ಶಾಸಕ ಡಿ ಜಿ ಶಾಂತನಗೌಡ್ರ್ರರವರಿಗೆ ಗ್ರಾಮ ಪಂಚಾಯಿತಿಗೆ ಜಾಗವನ್ನು ನೀಡಿದ ಕುಟುಂಬಸ್ಥರಿಗೆ ಸಂಬಂದ ಪಟ್ಟ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಸಿಬ್ಬಂದಿ ವರ್ಗದವರಿಗೆ ಹಾಗೂ ಸರ್ವ ಸದಸ್ಯರಿಗಳಿಗೆ ಗುತ್ತಿಗೆದಾರನಿಗೆ ಸನ್ಮಾನಿಸಲಾಯಿತು.
ಉಪಾಧ್ಯಕ್ಷೆ ಶಕುಂತಲಾ ಬಾಯಿ, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಮೋತಿಲಾಲ್, ಸಹಾಯಕ ನಿರ್ದೇಶಕ ಸಂಗಮೇಶ್ ಎಸ್ ಎಂ, ಪಿಡಿಒ ಸೋಮಶೇಖರಪ್ಪ ಎಸ್, ಲೋಹಿತ್ ಪಟೇಲ್ ಜಿಎನ್ ತಾಂತ್ರಿಕ ಸಹಾಯಕ ಅಭಿಯಂತರರು, ಗ್ರಾ. ಪಂ ಸದಸ್ಯರಾದ ನಾಗೇಶ್ ನಾಯ್ಕ, ಬಿಕೆ ನಟರಾಜಪ್ಪ, ನೇತ್ರಮ್ಮ, ಜಯಶ್ರೀ ಭೈರಪ್ಪ, ಅನಿತಾ ರಾಜಪ್ಪ, ಪಂಚಾಯಿತಿಯ ಸಿಬ್ಬಂದಿ ವರ್ಗದವರು ಮತ್ತು ಸಮಸ್ತ 5 ಗ್ರಾಮಗಳ ಗ್ರಾಮಸ್ಥರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.