ನ್ಯಾಮತಿ: ಸಮೀಪದ ಸುರಹೊನ್ನೆಗ್ರಾಮದಲ್ಲಿ ಕಾಯಕಯೋಗಿ ಸಿದ್ಧರಾಮೇಶ್ವರ ಜಯಂತಿ ಮತ್ತು ಸ್ಮರಣೋತ್ಸವ ಅಂಗವಾಗಿ ಸಿದ್ದರಾಮೇಶ್ವರರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ಸಿದ್ಧರಾಮೇಶ್ವರ ಜಯಂತಿ ಸ್ಮರಣೋತ್ಸವ
ಸೊನ್ನಲಗಿ ಸಿದ್ಧರಾಮೇಶ್ವರರು ಅಂದಿನ ಕಾಲದಲ್ಲಿಯೇ ಸಮಾಜುಮುಖಿ ಕೆಲಸಗಳನ್ನು ಮಾಡುವ ಮೂಲಕ ಕಾಯಕಯೋಗಿ ಆಗಿದ್ದರು ಎಂದು ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಸುರಹೊನ್ನೆಗ್ರಾಮದಲ್ಲಿತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಬಸವ ಬಳಗ, ಲಿಂಗಾಯತ ಮಹಾಸಭಾ ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಕಾಯಕಯೋಗಿ ಶ್ರೀಸಿದ್ಧರಾಮೇಶ್ವರ ಜಯಂತಿ ಮತ್ತು ಸ್ಮರಣೋತ್ಸವಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಅಧ್ಯಕ್ಷೆ ಜಯಶೀಲಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಲಮುರಿ ಶಾಂತರಾಜ ಪಾಟೀಲ ಅವರು ಸಿದ್ಧರಾಮೇಶ್ವರ ಕುರಿತುಅನುಭಾವ ಮಾತನಾಡಿದರು.
ಹಿರಿಯರಾದ ಕೆ.ಲೋಕೇಶ್ವರಪ್ಪ, ಬಿ.ಈಶ್ವರಪ್ಪ, ಎಸ್.ಆರ್.ಬಸವರಾಜಪ್ಪ, ಎಂ.ಎಚ್.ಬಸವರಾಜ ಮರಿಗೌಡ, ಎಸ್.ಜಿ.ಬಸವರಾಜಪ್ಪ ಹಾಗೂ ಸಿದ್ದರಾಮೇಶ್ವರ ಭಕ್ತರು ಉಪಸ್ಥಿತರಿದ್ದರು.
ಬಸವೇಶ್ವರ ಮಹಿಳಾ ಸಂಘದವರು ಭಜನೆಕಾರ್ಯಕ್ರಮ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

You missed