ಹುಣಸಘಟ್ಟ: ಕಲಿಯುಗದ ನಡೆದಾಡುವ ದೇವರು ಎನಿಸಿಕೊಂಡಿದ್ದ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯ ಐದನೇ ವರ್ಷದ ಪುಣ್ಯ ಸ್ಮರಣೆಯು ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಹನಗವಾಡಿ ಗ್ರಾಮದಲ್ಲಿ ಬುದುವಾರ ಬೆಳಿಗ್ಗೆ ನಡೆಯಿತು.
ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕ ರಾಜು ಅತಿಥಿಗಳಾಗಿ ಪಾಲ್ಗೊಂಡು ಅಲಂಕೃತ ಮಂಟಪದಲ್ಲಿ ಹಾಕಲಾಗಿದ್ದ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಿ ಮಾತನಾಡಿ ಶ್ರೀಗಳು ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳ ಕಾಲ ನಿರಂತರವಾಗಿ ಅವಕಾಶ ವಂಚಿತ ಮಕ್ಕಳಿಗೆ ಜಾತಿ ಮತ ಅಂತಸ್ತುಗಳನ್ನೆಣಿಸದೆ ಅನ್ನದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಸಿದ್ದಗಂಗೆಯ ಸಿದ್ದಿಪುರುಷರು. ಅವರು ನಾಡಿನ ಎಲ್ಲೆಡೆ ಇಂದಿಗೂ ಎಂದೆಂದಿಗೂ ಪ್ರಾತಃ ಸ್ಮರಣೀಯರು ಎಂದ ಅವರು ಶರಣರ ಪರಂಪರೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲು ತ್ರಿವಿಧ ದಾಸೋಹಕ್ಕೆ ಶತಮಾನದ ಬದುಕನ್ನು ಸಾರ್ಥಕ ಪಡಿಸಿಕೊಂಡ ಶಿವಕುಮಾರ ಶ್ರೀಗಳು ಶಿವನಲ್ಲಿ ಐಕ್ಯವಾಗಿದ್ದರು ಕೋಟ್ಯಾಂತರ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಯುರಿದ್ದಾರೆ ಎಂದರು.
ಪುಣ್ಯಸ್ಮರಣೆಯಲ್ಲಿ ಗ್ರಾಮದ ಮುಖಂಡರುಗಳಾದ ಗುರು ಶಾಂತಪ್ಪ ವಿಜಯ್ ಸುರೇಶ್ ಪ್ರವೀಣ ಮಹಮ್ಮದ್ ರಫಿ ನಾಗರಾಜ್ ರಾಜು ಮಲ್ಲೇಶ್ ಜಯಪ್ಪಹಾಗೂ ಕನ್ನಡ ಹಾಗೂ ಉರ್ದು ಶಾಲಾ ಶಿಕ್ಷಕರು ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಬೆಳಗಿನಿಂದಲೂ ದಾಸೋಹವು ನಡೆಯಿತು.