ನ್ಯಾಮತಿ:ಮನಷ್ಯರಾಗಿ ಹುಟ್ಟಿ ಸಾಯುವುದು ಮುಖ್ಯವಲ್ಲ, ಜೀವಿತಾವಧಿಯಲ್ಲಿ ಸಮಾಜಕ್ಕಾಗಿ ಏನಾದರೂ ಸೇವೆ ಸಲ್ಲಿಸಬೇಕು ಎಂದು ಪತ್ರಕರ್ತ ಹೊಳೆಮಠ ಸಿದ್ಧಲಿಂಗಸ್ವಾಮಿ ಹೇಳಿದರು.
ಪೇಟೆ ಬಸವೇಶ್ವರ ದೇವಾಲಯ ಟ್ರಸ್ಟ್ ವತಿಯಿಂದ ಬುಧವಾರ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ, ಹಿರೇಕಲ್ಮಠ ಒಡೆಯರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತು ರಾಂಪುರ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತ್ರಿವಳಿ ಗುರುಗಳ ಪುಣ್ಯಸ್ಮರಣೆ ಮತ್ತು ಶವಸಂಸ್ಕಾರಕ್ಕಾಗಿ ಸುಧಾರಿತ ತಳ್ಳುವ ಮುಕ್ತಿರಥ ಸಿದ್ದಗೊಳಿಸಿರುವ, ಸಾಮಾಜಿP, ಧಾರ್ಮಿಕÀ ಚಟುವಟಿಕೆಗಳಲ್ಲಿ ಸದಾ ತೊಡಗಿರುವ ಟ್ರಸ್ಟ್‍ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮನುಷ್ಯರಾಗಿ ಹುಟ್ಟಿದ ಮೇಲೆ ಗುರುಗಳ ಮುಖಾಂತರ ಸಂಸ್ಕಾರ ಪಡೆಯಬೇಕು, ರಾಗ,ದ್ವೇಷಗಳನ್ನು ಬಿಟ್ಟು ಒಳಿತು ಮಾಡುವ ಬಗ್ಗೆ ಚಿಂತನೆ ಮಾಡುವಂತೆ ಟ್ರಸ್ಟ್‍ನ ಗೌರವಾಧ್ಯಕ್ಷ ವೈದ್ಯ ಡಿ.ಬಸವರಾಜಪ್ಪ ತಿಳಿಸಿದರು.
ಸಮಾಜದಲ್ಲಿ ಸಮಾಜುಮುಖಿ ಕೆಲಸಗಳನ್ನು ಮಾಡುವವರಿಗೆ ಪ್ರೋತ್ಸಾಹ ನೀಡುವ ಕೆಲಸ ಇಂದು ಆಗಬೇಕಿದೆ, ಸಾವಿಗೆ ಬಡವ, ಶ್ರೀಮಂತ ಭೇದವಿಲ್ಲ. ಪಟ್ಟಣದಲ್ಲಿ ರುದ್ರಭೂಮಿ ದೂರವಿರುವುದನ್ನು ಮನಗಂಡು ಸುಧಾರಿತ ತಳ್ಳುವ ಮುಕ್ತಿರಥವನ್ನು ತಯಾರಿಸಿದ್ದು, ಇದರ ಉಪಯೋಗವನ್ನು ಪಡೆಯುವಂತೆ ಟ್ರಸ್ಟ್‍ನ ಅಧ್ಯಕ್ಷ ಎನ್.ವೈ.ಸಂತೋಷಕುಮಾರ ಮನವಿ ಮಾಡಿದರು.
ಕೋಹಳ್ಳಿಮಠದ ವಿಶ್ವರಾಧ್ಯರು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಟ್ಟರು.
ಟ್ರಸ್ಟ್‍ನ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಬಳೆಗಾರ, ಕುಂಬಾರ ಸಮುದಾಯದ ಮುಖಂಡ ಕೆ.ಎಸ್.ಮಂಜುನಾಥ ಮಾತನಾಡಿದರು.
ಪತ್ರಕರ್ತರಾದ ಎಚ್.ಎಂ.ಸದಾಶಿವಯ್ಯ ಹಿರೇಮಠ, ಡಿ.ಎಂ.ಹಾಲಾರಾಧ್ಯ ಹಾಗೂ ಟ್ರಸ್ಟ್‍ನ ಪದಾಧಿಕಾರಿಗಳುಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *