ನ್ಯಾಮತಿ: ತಾಲೂಕ್ ಆಡಳಿತ ವತಿಯಿಂದ 14ನೇ ವರ್ಷದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಯಿತು. ತಹಶೀಲ್ದಾರ್ ಗೋವಿಂದಪ್ಪನವರು ತಾವು ಸೇರಿದಂತೆ ತಾಲೂಕ ಆಡಳಿತ ಸಿಬ್ಬಂದಿ ವರ್ಗದವರಿಗೆ ಮತದಾರರ ಪ್ರತಿಜ್ಞ ವಿಧಿ ಬೋಧಿಸಿದ್ದು ಹೀಗೆ, ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಎಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆಯನ್ನು ಸ್ವೀಕರಿಸಿದರು . ಉಪ ತಹಸಿಲ್ದಾರ್ ನಂದ್ಯಪ್ಪ, ಚಿರಸ್ತಿದಾರ್ ಕೆಂಚಮ್ಮ, ಸುಧೀರ್, ಧನುಷ್, ಲೀಲಾವತಿ, ಆರ್ ಜೆ ವೃಷಭೇಂದ್ರಯ್ಯ, ಇನ್ನು ಮುಂತಾದವರು ಭಾಗವಹಿಸಿದ್ದರು.