ಹೊನ್ನಳ್ಳಿ ಜನವರಿ 25ರಂದು ನಡೆದ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಹೊನ್ನಾಳಿ ತಾಲೂಕಿನ “ಎ’ ವರ್ಗದಿಂದ ಎರಡನೇ ಬಾರಿಗೆ ನಿರ್ದೇಶಕರಾಗಿ 19 ಮತ ಪಡೆದು ಬಹುಮತದಿಂದ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ 3 ಮತ ಪಡೆಯುವಂತೆ ಮಾಡಿ ಪರಾಜಿತಗೊಳಿಸಿದ್ದಾರೆ. ಹೊನ್ನಾಳಿ ಸಹಕಾರ ಕ್ಷೇತ್ರಕ್ಕೆ ಡಿ ಎಸ್ ಸುರೇಂದ್ರ ಅವರ ಆಯ್ಕೆ ಕಳೆ ಬಂದಂತಾಗಿದ್ದು, ಅವರಿಗೆ ಮತ ಹಾಕಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇವರ ಅಭಿಮಾನಿಗಳು ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ.