ನ್ಯಾಮತಿ: ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ 75ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಅವಳಿ ತಾಲೂಕಿನ ಶಾಸಕ ಡಿ,ಜಿ ಶಾಂತನಗೌಡ್ರು ಧ್ವಜಾರೋಹಣವನ್ನು ನೆರವೇರಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಜನವರಿ 26 75ನೇ ವರ್ಷದ ಭಾರತದ ಗಣರಾಜ್ಯೋತ್ಸವ ಹಾರ್ದಿಕ ಶುಭಾಶಯಗಳುನ್ನು ಕೋರಿ, ಭಾರತ ಒಂದು ಗಣರಾಜ್ಯವಾಗಿ ಇಂದಿಗೆ 75 ವರ್ಷಗಳು ಕಳೆದಿವೆ. 1947 ಆಗಸ್ಟ್ 15 ರಂದು ಭಾರತ ಸ್ವತಂತ್ರ ಗೊಂಡರು ಸಹ ಒಂದು ಒಕ್ಕೂಟವಾಗಿ ಭಾರತ ರಚನೆಯಾಗಿದೆ. 1950 ಜನವರಿ 26ರಂದು ಸಂವಿಧಾನವನ್ನು 1949ರ ನವಂಬರ್ 16ರಂದು ಅಂಗೀಕರಿಸಿದ್ದರು ಸಹ ರಾಷ್ಟ್ರೀಯ ಕಾಂಗ್ರೆಸ್ ಲಾಹೋರ್ ಅಧಿವೇಶನದಲ್ಲಿ ಅನುಮೋದನೆಗೊಂಡು ಸ್ವರಾಜ್ಯ ಎಂದು ಘೋಷಣೆಯಾಗಿದೆ.
ನಮ್ಮ ಸರ್ಕಾರ ಭವಿಷ್ಯದ ಭಾರತ ಕಟ್ಟಲು ಸುಭದ್ರ ಅಡಿಪಾಯ ಹಾಕುವ ದೃಷ್ಟಿಯಿಂದ ರಾಜ್ಯದ ಕಟ್ಟ ಕಡೆಯ ವ್ಯಕ್ತಿಗಳು ನಿರ್ಗತಿಕರು, ಬಡವರು, ಮಹಿಳೆಯರು, ಯುವಕರು ಮತ್ತು ಸಾಧಕರನ್ನ ಗಮನದಲ್ಲಿಟ್ಟುಕೊಂಡು ಗೃಹಜೋತಿ, ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಹೀಗೆ ಹತ್ತು ಹಲವಾರು ಯೋಜನೆಗಳನ್ನ ಜಾರಿಗೆ ತಂದಿದ್ದು, ಬಡವರ ಹತ್ತು ಹಲವು ಕನಸುಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ಈ ವಿಚಾರವನ್ನು ಗಣರಾಜ್ಯೋತ್ಸವದ ದಿನ ನಿಮ್ಮ ಮುಂದೆ ಹಂಚಿಕೊಳ್ಳಲು ನನಗೆ ಶಾಸಕನಾಗಿ ಹೆಮ್ಮೆ ಅನಿಸುತ್ತಿದೆ ಎಂದು ಹೇಳಿದರು.

ತಹಸಿಲ್ದಾರ್ ಹೆಚ್‍ಬಿ ಗೋವಿಂದಪ್ಪನವರು ಗಣರಾಜ್ಯೋತ್ಸವದ 1950 ಜನವರಿ 26ರಂದು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೇತೃತ್ವದ ಸಂವಿಧಾನ ರಚನಾ ಸಮಿತಿಯ ಸುಧೀರ್ಘವಾದ ಅಧ್ಯಯನದ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪಟ್ಟಣದ ಪೌರಕಾರ್ಮಿಕರಿಗೆ ಸಮವಸ್ತ್ರ ಕೊಟ್ಟು ಸನ್ಮಾನಿಸಿದರು.
ಮುಂದಿನ ವರ್ಷ ಗಣರಾಜ್ಯೋತ್ಸವವನ್ನು ನ್ಯಾಮತಿ ತಾಲೂಕಿನಲ್ಲಿ ಆಚರಿಸುತ್ತೇವೆ. ಸ್ವತಂತ್ರ ದಿನಾಚರಣೆ ಹೊನ್ನಾಳಿಯಲ್ಲಿ ಆಚರಣೆ ಮಾಡಲಾಗುವುದು, ಅದರ ಜೊತೆಗೆ ನ್ಯಾಮತಿ ಕ್ರೀಡಾಂಗಣದಲ್ಲಿ ನೂತನ ಕ್ರೀಡಾ ಸಭಾಂಗಣ ನಿರ್ಮಿಸಿ ನಾನೇ ಉದ್ಘಾಟಿಸುತ್ತೇನೆ ಎಂದು ಮಕ್ಕಳ ಎದುರುಗಡೆ ತಿಳಿಸಿದರು. ಪೆÇಲೀಸ್ ಇಲಾಖೆ ಮತ್ತು ಗೃಹರಕ್ಷಕದಳ ಮತ್ತು ವಿದ್ಯಾರ್ಥಿಗಳಿಂದ ಪೆರೇಡ್ ನಡೆಸಲಾಯಿತು.

ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆಗಳ ನೃತ್ಯ ಮಾಡಿ ಮನ ರಂಜಿಸಿದರು.
ಪೆÇಲೀಸ್ ಇನ್ಸ್ಪೆಕ್ಟರ್ ರವಿ ಎನ್ ವಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶ್ ರಾವ್, ತಾಲೂಕು ಮಟ್ಟದ ಅಧಿಕಾರಿ ವರ್ಗ ಸೇರಿದಂತೆ ಸಾರ್ವಜನಿಕರು ವಿದ್ಯಾರ್ಥಿಗಳು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *