ನ್ಯಾಮತಿ: (ದೊಡ್ಡೇರಿ) ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ನಿಯಮಿತ ದಾವಣಗೆರೆ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ 2024 “ಎ’ ವರ್ಗ ನ್ಯಾಮತಿ ಸಾಲಗಾರರ ಕ್ಷೇತ್ರ ತಾಲೂಕು ಕೃಷಿ ಪತ್ತಿನ ಸಹಕಾರ ಸೇವಾ ಸಂಘಗಳಿಂದ ಜ,25ರಂದು ನಡೆದ ಚುನಾವಣೆಯಲ್ಲಿ 10 ಮತಗಳ ಪಡೆದು ಡಿ,ಜಿ ವಿಶ್ವನಾಥ್ ರವರು ಜಯಶೀಲರಾಗಿದ್ದಾರೆ. ಅದರ ಹಿನ್ನೆಲೆಯಲ್ಲಿ ದೊಡ್ಡ ಎತ್ತಿನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರು ಮತ್ತು ಸರ್ವ ನಿರ್ದೇಶಕರು ಅವರ ಸ್ವ ಗೃಹಕ್ಕೆ ಬಂದು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಅಧ್ಯಕ್ಷ ದಾನೇಶಪ್ಪ ನಿರ್ದೇಶಕರುಗಳಾದ ಮಹೇಶ್ವರಪ್ಪ, ಯೋಗೇಶ್ ಕೊಡಚಕೊಂಡನಹಳ್ಳಿ, ಶಶಿ ದಾನೆಹಳ್ಳಿ, ಗದಿಗೇಶಪ್ಪ ದಾನೆಶಪ್ಪ ,ನಾಗೇಂದ್ರಪ್ಪ, ಚೆನ್ನಮ್ಮ, ಮಮತಾ ಇನ್ನು ಮುಂತಾದವರು ಭಾಗಿಯಾಗಿದ್ದರು.