ಹುಣಸಘಟ್ಟ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಂದು ಗ್ರಾಮೀಣ ಮಹಿಳೆಯರಿಗೆ ವರದಾನವಾಗಿದೆ ಎಂದು ಬಾಗೇವಾಡಿ ಗ್ರಾಮದ ಉಪನ್ಯಾಸಕ ಓಂಕಾರಪ್ಪ ಗೌಡ್ರು ಹೇಳಿದರು.
ಹೊನ್ನಾಳಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಮ್ಮಿಕೊಂಡ ಸಂಘಗಳ ವಾರ್ಷಿಕೋತ್ಸವ ಹಾಗೂ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಮೀಣ ಭಾಗದ ಮಹಿಳೆಯರು ಮತ್ತು ಮಕ್ಕಳಿಗೆ ತುರ್ತು ಸಹಾಯದ ಅಗತ್ಯವಿದೆ ಎಂಬುದನ್ನು ಮನಗಂಡ ಡಾ. ವೀರೇಂದ್ರ ಹೆಗಡೆಯವರು ಜ್ಞಾನವಿಕಾಸ ಮತ್ತು ಸಿರಿ ಅಂತಹ ವಿಶೇಷ ಸ್ವ ಸಹಾಯ ಕಾರ್ಯಕ್ರಮಗಳನ್ನು ಪರಿಚಯಿಸಿ ಅದು ಮಹಿಳೆಯರಿಗೆ ತಮ್ಮನ್ನು ತಾವು ಸಬಲೀಕರಣ ಗೊಳಿಸಲು ಮತ್ತು ಘನತೆ, ಸ್ವಾಭಿಮಾನದಿಂದ ಬದುಕಲು ಕಲಿಸುತ್ತದೆ. ಜ್ಞಾನ ವಿಕಾಸ ಕೇಂದ್ರಗಳು ಭೂಮಿ ಇಲ್ಲದ ಅವಿದ್ಯಾವಂತ ನಿರುದ್ಯೋಗಿ ಗ್ರಾಮೀಣ ಮಹಿಳೆಯರಿಗೆ ಸಾಮಾಜಿಕ ಆರ್ಥಿಕ ಸಬಲೀಕರಣದ ವಿಶಿಷ್ಟ ಕೇಂದ್ರಗಳಾಗಿವೆ. ಜ್ಞಾನ ವಿಕಾಸ ಕೇಂದ್ರಗಳಲ್ಲಿ ಮಹಿಳೆಯರು ವಾರಕ್ಕೊಮ್ಮೆ 2 ಗಂಟೆಗಳ ಗುಂಪು ಅಧಿವೇಶನಗಳ ಮೂಲಕ ಆರೋಗ್ಯ ಕುಟುಂಬ ಕಲ್ಯಾಣ ನೈರ್ಮಲ್ಯ ಮಕ್ಕಳ ಶಿಕ್ಷಣ ಮತ್ತು ಸ್ವಚ್ಛ ಸುತ್ತಮುತ್ತಲಿನ ಜ್ಞಾನವನ್ನು ಹಂಚಿಕೊಳ್ಳುತ್ತಾರೆ ಒಬ್ಬರಿಗೊಬ್ಬರು ಸ್ಪೂರ್ತಿ ಪಡೆಯುವುದರ ಜೊತೆಗೆ ಮಹಿಳೆಯರು ಕುಟುಂಬ ಮೌಲ್ಯಗಳನ್ನು ಬೆಳೆಸುವ ಮತ್ತು ಉಳಿತಾಯದ ಅಭ್ಯಾಸವನ್ನು ಬೆಳೆಸಿಕೊಳ್ಳುವ ಬಗ್ಗೆ ಕಲಿಸುತ್ತಾರೆ ಎಂದರು.
ತಾಲೂಕು ಯೋಜನಾಧಿಕಾರಿ ಬಾಬು ಮಾತನಾಡಿ ವ್ಯಕ್ತಿ ಪರಿವರ್ತನೆ ಕುಟುಂಬದ ಪರಿವರ್ತನೆ ಗಾಮಗಳ ಅಭಿವೃದ್ಧಿ ಈ ಮೂರು ಪರಿಕಲ್ಪನೆಗಳನ್ನು ಇಟ್ಟುಕೊಂಡು ಪೂಜ್ಯರು 1982ನೇ ಇಸ್ವಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭಗೊಂಡು ಒಂದು ಸಂಘ 8 ಮಂದಿ ಸದಸ್ಯರಿಂದ ಪ್ರಾರಂಭಗೊಂಡ ಸಂಘ ಇಂದು ಕರ್ನಾಟಕದ್ಯಂತ 60 ಲಕ್ಷ ಸದಸ್ಯರನ್ನು ಒಳಗೊಂಡು 6 ಲಕ್ಷ ಸಂಘಗಳು ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಪಾಲುದಾರರಾಗಿಸಿಕೊಂಡು ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಸೌಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು.
ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ಈಶ್ವರಪ್ಪ ಗೌಡ್ರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಂತಹ ಸ್ವಸಹಾಯ ಸಂಘದ ಮಹಿಳೆಯರಿಗೆ ಬಹುಮಾನ ವಿತರಿಸಿ ಮಾತನಾಡಿದ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಸವಿತ, ಉಪಾಧ್ಯಕ್ಷ ರೂಪ, ಗ್ರಾ ಪಂ ಸದಸ್ಯರಾದ ರಮೇಶ್,ನೀಲಮ್ಮ, ಗ್ರಾಮದ ಮುಖಂಡರಾದ ಬಸವರಾಜಪ್ಪ ಗೌಡ್ರು ಮುಖ್ಯ ಶಿಕ್ಷಕ ಬಸಯ್ಯ, ಮಂಜಪ್ಪ ಶಿವಾಜಿ ರಾವ್ ಮಾರುತಿರಾವ್ ಸೈನಪ್ಪ ಕೃಷ್ಣಪ್ಪ ವಲಯದ ಮೇಲ್ವಿಚಾರಕ ಗಿರೀಶ್ ಸೇವಾ ಪ್ರತಿನಿಧಿ ಮಂಜಪ್ಪ ಮೊದಲಾದವರು ಉಪಸ್ಥಿತರಿದ್ದರು.