ನ್ಯಾಮತಿ: ತಾಲ್ಲೂಕಿನ ಕುಂಕುವ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ಪಾಂಡುರಂಗಯ್ಯ(62) ಅವರ ಕತ್ತುಸೀಳಿ ಕೊಲೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳು ಹಾಗೂ ಕೊಲೆಗೆ ಸುಫಾರಿ ಕೊಟ್ಟಿದ್ದ ಆರೋಪಿಯನ್ನು ನ್ಯಾಮತಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಹರಿಹರ ತಾಲ್ಲೂಕು ಬೆಳ್ಳೊಡಿ ಗ್ರಾಮzವರಾದÀ ಆಂಜನೇಯ(23) ಮತ್ತು ಅನಿಲ(23) ಅವರನ್ನು ಬೂದಿಗೆರೆ ಗ್ರಾಮದಲ್ಲಿ ಹಾಗೂ ಕೊಲೆಗೆ ಸಂಚು ರೂಪಿಸಿದ್ದ ಕುಂಕುವ ಗ್ರಾಮದ ಉಮೇಶಪ್ಪ ಅವರನ್ನು ಅವರ ಮನೆಯಲ್ಲಿ ಬಂಧಿಸಲಾಗಿದೆ.
ಆರೋಪಿಗಳ ಪತ್ತೆಗೆ ಸಣ್ಣ ಕುರುಹು ಇರಲಿಲ್ಲ, ನೊಂದ ಪಾಂಡುರಂಗಯ್ಯ ಅವರು ಪದೇ ಪದೇ ಪಕ್ಕದ ಮನೆಯ ಉಮೇಶ ಅವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಸುಳಿವಿನ ಮೇಲೆ ತನಿಖೆ ಚುರುಕುಗೊಳಿಸಿದಾಗ ಆರೋಪಿಗಳ ಪತ್ತೆಗೆ ಸಹಕಾರಿಯಾಯಿತು. ಪಕ್ಕದ ಮನೆಯ ಉಮೇಶ ಅವರೊಂದಿಗೆ ಜಮೀನಿ£ ವಿಚಾರದಲ್ಲಿ ಜಗಳ ಇದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಉಮೇಶ ಎಲೆ ಕೊಯ್ಯುವ ಕೆಲಸ ಮಾಡುತ್ತಿದ್ದ ಆರೋಪಿಗಳೊಂದಿಗೆ ಸಂಚು ರೂಪಿಸಿದ್ದ. ಜಿಲ್ಲಾ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಡಿವೈಎಸ್ಪಿ ಪ್ರಶಾಂತ ಮನ್ನೋಳಿ ಅವರ ಸೂಚನೆಯಂತೆ ತಮ್ಮ ನೇತೃತ್ವದಲ್ಲಿ ಸಬ್ಇನ್ಸ್ಪೆಕ್ಟರ್ ಬಿ.ಎಲ್.ಜಯಪ್ಪನಾಯ್ಕ,ಕಾನ್ಸ್ಟೇಬಲ್ಗಳಾದ ರಂಗಸ್ವಾಮಿ, ಮಹೇಶನಾಯ್ಕ,ಆನಂದ,ಉಮೇಶ ಆರೋಪಿಗಳ ಪತ್ತೆ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಿದರು ಎಂದು ಸರ್ಕಲ್ ಇನ್ಸ್ಪೆಕ್ಟರ್ ಎನ್.ಎಸ್.ರವಿ ತಿಳಿಸಿದರು.
ಕಳೆದ ಡಿ. 22ರಂದು ತೋಟದ ಮನೆಯಲ್ಲಿ ತಮ್ಮ ಪತ್ನಯೊಂದಿಗೆ ವಾಸವಿದ್ದ ಪಾಂಡುರಂಗಯ್ಯ ಅವರನ್ನು ರಾತ್ರಿ ಬೈಕ್ನಲ್ಲಿ ಬಂದ ಆರೋಪಿಗಳು ನೀರು ಕೇಳುವ ನೆಪದಲ್ಲಿ ಮಾತನಾಡಿಸಿ, ನಂತರ ಬೈಕ್ನಿಂದ ಬಿದ್ದು ಗಾಯವಾಗಿದೆ ಅರಿಷಿನಪುಡಿ ಮತ್ತು ಸಕ್ಕರೆ ಕೊಡಿ ಎಂದು ಕೇಳಿದ್ದಾರೆ. ಸಕ್ಕರೆ ಇಲ್ಲ ಎಂದು ಹೇಳಿದಾಗ ಪಾಂಡುರಂಗಯ್ಯ ಅವರನ್ನು ಮನೆಯ ಹೊರಗಡೆ ಬಿಳಿಸಿಕೊಂಡು ಕುತ್ತಿಗೆಯನ್ನು ಚಾಕುವನ್ನು ಕೊಯ್ಯುತ್ತಿರುವುದನ್ನು ಕಂಡು ಪತ್ನಿ ಕೂಗಾಡಿದಾಗ ಓಡಿ ಹೋಗಿರುವ ಘಟನೆ ನಡೆದಿತ್ತು. ಪಾಂಡುರಂಗಯ್ಯ ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಈ ಪ್ರಕರಣ ಈ ಭಾಗದ ಜನರಲ್ಲಿ ಆತಂಕ ಮೂಡಿಸಿತ್ತು. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆ ಮಾಡಿದ ನ್ಯಾಮತಿ ಪೊಲೀಸರಿಗೆ ಸಾರ್ವಜನಿಕರು ಅಭಿನಂದಿಸಿದ್ದಾರೆ.