ಹೊನ್ನಾಳಿ; ಜ.28 ತಾಲೂಕಿನ ಹಿರೇಗೋಣಗೇರಿ ಒಂದನೇ ಕೇಂದ್ರ ಹರಗನಹಳ್ಳಿ, ಚಿಕ್ಕಗೋಣಗೇರಿ ಗ್ರಾಮದಲ್ಲಿ ಅಂಗನವಾಡಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಈ ಮೂರು ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಅವಳಿ ತಾಲೂಕಿನ ಶಾಸಕ ಡಿ ಜಿ ಶಾಂತನಗೌಡ್ರು ಟೇಪ್ ಕತ್ತರಿಸುವ ಮೂಲಕ ನೆರವೇರಿಸಿ ನಂತರ ಮಾತನಾಡಿದ ಅವರು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಎಸ್ ಸಿ ಪಿ, ಟಿ/ ಎಸ್ ಪಿ, ಯೋಜನೆಯಲ್ಲಿ ಹರಗನಹಳ್ಳಿ ಮತ್ತು ಹಿರೇಗೋಣೆಗೇರಿ ಗ್ರಾಮದಲ್ಲಿ ತಲಾ ಹತ್ತು ಲಕ್ಷ ರೂ ವೆಚ್ಚದ ಅಂದಾಜು ಮೊತ್ತದಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ಅದರ ಜೊತೆಗೆ ಚಿಕ್ಕಗೋಣಗೇರಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಸುಮಾರು 8 ಲಕ್ಷ ಮೌಲ್ಯದ ಅಂಗನವಾಡಿ ಕಟ್ಟಡ ಸಹ ಸುಸಜ್ಜಿತವಾಗಿ ನಿರ್ಮಾಣಗೊಂಡು ಮದವಣಗಿತ್ತಿಯಂತೆ ಕಟ್ಟಡ ತಯಾರಾಗಿವೆ.
ಗ್ರಾಮ ಮಟ್ಟದಲ್ಲಿರುವ ತಂದೆ ತಾಯಿಯವರು ಆರು ತಿಂಗಳಿನಿಂದ ಹಿಡಿದು ಆರು ವರ್ಷದವರೆಗೆ ಪುಟಾಣಿ ಮಕ್ಕಳು ಪ್ರಥಮ ಶಿಕ್ಷಣ ಪಡೆಯಬಹುದಾಗಿದೆ. ಗ್ರಾಮ ಮಟ್ಟದಲ್ಲಿ ಇರತಕ್ಕಂತ ಸಾರ್ವಜನಿಕರು ಅಂಗನವಾಡಿ ಕೇಂದ್ರದಲ್ಲಿ ಸುಸಜ್ಜಿತವಾದ ಪೌಷ್ಟಿಕ ಆಹಾರ ಕೊಡುವುದರ ಜೊತೆಗೆ ಉತ್ತಮ ಶಿಕ್ಷಣವನ್ನ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿರು ನೀಡುತ್ತಿದ್ದಾರೆ, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗರಾಜಪ್ಪ ವನಜಾಕ್ಷಮ್ಮ, ಉಪಾಧ್ಯಕ್ಷರಾದ ಗೀತಮ್ಮ, ಬಸವರಾಜಪ್ಪ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೋಮಣ್ಣ, ಚಿಕ್ಕಗೋಣಗೇರಿ ಶಿವಮೂರ್ತಿ , ಎಸಿಡಿಪಿಓ ಫಾತಿಮಾ, ವಲಯ ಸೂಪರ್ವೈಸರ್ ಮಂಜಮ್ಮ ಪಿ, ಪಿಡಿಒ ಅರುಣ್, ಕಾರ್ಯದರ್ಶಿ ರಾಜೇಂದ್ರ,ಗ್ರಾಮ ಪಂಚಾಯಿತಿ ಸರ್ವ ಸದಸ್ಯರುಗಳು ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು, ಮತ್ತು ಗ್ರಾಮದ ಮಟ್ಟದ ಮುಖಂಡರು ಸಹ ಭಾಗಿಯಾಗಿದ್ದರು.