ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಎಡಿವಿಎಸ್ ಸಮೂಹ ಸಂಸ್ಥೆಗಳ 2023-24ನೇ ಸಾಲಿನ ವಾರ್ಷಿಕೋತ್ಸವ, ಕರ್ನಾಟಕ ಸುವರ್ಣ ಮಹೋತ್ಸವ ಅಂಗವಾಗಿ ಕನ್ನಡೋತ್ಸವ ಮತ್ತು ಸುಗ್ಗಿ ಸಂಭ್ರಮಾಚರಣೆ ತಾಲೂಕು ಹೊನ್ನುಡಿ ಕನ್ನಡ ವೇದಿಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಯಾರು ಹಳ್ಳಿಯ ಪರಿಸರದ ಮಧ್ಯೆ ಬೆಳೆಯುತ್ತಾರೋ ಅಂತವರು ಪ್ರೌಡಿಮೆಯಿಂದ ಬೆಳೆಯುತ್ತಾರೆ. ನಾನು ಕೂಡ ಹಳ್ಳಿಯಲ್ಲಿ ಬೆಳೆದು ಓದಿದವನು ಒಂದು ಶಿಕ್ಷಣ ಸಿಕ್ಕ ಕಾರಣಕ್ಕೋಸ್ಕರ ನನ್ನ ಹಳ್ಳಿಯಿಂದ ದಿಲ್ಲಿವರೆಗೂ ಹೋಗಿ ಬರುವ ಅವಕಾಶವನ್ನು ಜನ ಮತ್ತು ದೇವರು ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ನಮ್ಮ ಮಕ್ಕಳಲ್ಲಿಯೂ ಕೂಡ ಭಗವಂತ ಒಳ್ಳೆಯ ಅವಕಾಶ ಮಾಡಿ ಕೊಟ್ಟಿರುತ್ತಾನೆ ಅವರ ಚಟುವಟಿಕೆಗಳನ್ನು ಗಮನಿಸಿ ಅವರಿಗೆ ಉತ್ತೇಜನ ಕೊಟ್ಟು ಪೋಷಕರು ಮನೆಯಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರು ಏನು ಕಲಿಸಿದ್ದಾರೆ ಎಂದು ಪರೀಕ್ಷೆ ಮಾಡಿ ಅವರನ್ನು ತಿದ್ದಿದರೆ ನಿಮ್ಮ ಮಕ್ಕಳು ಆಕಾಶದೆತ್ತರಕ್ಕೆ ಬೆಳೆದು ನಿಲ್ಲುತ್ತಾರೆ. ನೀವು ನೋಡು ನೋಡುತ್ತಲೇ ನಿಮ್ಮ ಮಕ್ಕಳು ಎಷ್ಟು ದೊಡ್ಡ ವ್ಯಕ್ತಿಗಳಾಗಗುತ್ತಾರೆ. ಶಾಂತ ಕೃಷ್ಣಮೂರ್ತಿ ಅವರು ತಮ್ಮ ಮಕ್ಕಳನ್ನು ಡಾಕ್ಟರ್ ಆಗಿ ನೋಡಿದ್ದಾರೆ. ಕಳೆದ 34 ವರ್ಷದಿಂದ ಒಂದು ಸಂಸ್ಥೆ ಕಟ್ಟಿ ಸಾವಿರಾರು ಮಕ್ಕಳಿಗೆ ಶಿಕ್ಷಣವನ್ನು ಕೊಡುವ ಮಟ್ಟಿಗೆ ಬಿಳಿದಿದ್ದಾರೆ ಎಂದರೆ ಅದು ಕಡಿಮೆ ಸಾಧನೆ ಅಲ್ಲ ಅದು ಸುಲಭದ ಮಾತು ಅಲ್ಲ ಎಂದರು.
ಕನ್ನಡ ಉಪನ್ಯಾಸಕ ಕೆ ನಾಗೇಶ್ ಕನ್ನಡ ನಾಡು ನುಡಿ ಕುರಿತು ಮಾತನಾಡಿ ಕರ್ನಾಟಕ ಏಕೀಕರಣಗೊಂಡು 67 ಸಂವತ್ಸರಗಳು ಕಳೆದರೂ ಇನ್ನೂ ಜ್ವಲಂತ ಸಮಸ್ಯೆಗಳು ಕನ್ನಡಿಗರನ್ನು ಕಂಗಡಿಸಿವೆ. ಗಡಿ ಸಮಸ್ಯೆಗಳು ಕಾವೇರಿ ಕೃಷ್ಣಾ ನದಿ ಜಲ ವಿವಾದಗಳು ವಿಭಜನೆಗಳ ಕೂಗು ಮಹಾಜನ ವರದಿ ಅನುಷ್ಠಾನ ಹಾಗಾದಿರುವುದು ಮೇ 6, 2014 ರ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರದ ಭಾಷಾ ಮಾಧ್ಯಮ ನೀತಿಯನ್ನು ರದ್ದು ಪಡಿಸಿರುವುದು, ಒಗ್ಗಟಿನ ಕೊರತೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದರೂ ಕನ್ನಡ ಭಾಷೆ ಇನ್ನೂ ಅತಂತ್ರ ಸ್ಥಿತಿಯಲ್ಲಿರುವುದು ಇನ್ನು ಮುಂತಾದ ಸಮಸ್ಯೆಗಳು ಸವಾಲುಗಳಾಗಿವೆ. ಮಾತೃಭಾಷೆ ಉಳಿವಿಗಾಗಿ ಸರ್ಕಾರ ಕನ್ನಡ ಭಾಷೆ ಮುತ್ತಿನ ಚೀಲ ತುಂಬುವ ಭಾಷೆಯಾಗುವಂತೆ ಕನ್ನಡಿಗರಿಗೆ ಉದ್ಯೋಗವಕಾಶಗಳನ್ನು ನೀಡಬೇಕು, ಕೇವಲ ಸರ್ಕಾರ ಸಾಹಿತ್ಯ ಪರಿಷತ್ತು ಕನ್ನಡಪರ ಮನಸ್ಸುಗಳು ಒಂದಾಗಿ ಕನ್ನಡ ನುಡಿ ಬೀಜ ಬಿತ್ತುವ ಕಾರ್ಯದಲ್ಲಿ ನಿರಂತರಾಗಬೇಕು ಏಕೆಂದರೆ ಕನ್ನಡ ಉಳಿಯಬೇಕಾದದ್ದು ಜನರಿಂದಲೇ ಜನರ ನಾಲಿಗೆಯ ಮೇಲೆ ಸದಾ ಜೀವಂತವಾಗಿರಬೇಕು ಎಂದರು.
ಡಾ. ಎಸ್ ಎಚ್ ಕೃಷ್ಣಮೂರ್ತಿ ಕಾಲೇಜು ಸಂಸ್ಥಾಪಕ ಅಧ್ಯಕ್ಷರು ಮಾತನಾಡಿ ನಾನು ದುಡ್ಡು ಮಾಡಲು ಶಿಕ್ಷಣ ಸಂಸ್ಥೆಯನ್ನು ತೆರೆದಿಲ್ಲ. ನಮ್ಮ ಭಾಗದ ಬಡ ಮಕ್ಕಳು ಬುದ್ಧಿವಂತರಾಗಲು ವಿದ್ಯಾ ಸಂಸ್ಥೆಯನ್ನು ತೆರೆದಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಸಂಸ್ಥಾಪಕ ಕಾರ್ಯದರ್ಶಿ ಶಾಂತ ಕೃಷ್ಣಮೂರ್ತಿ ವಹಿಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಜಬ್ಬರ್ ಆಲಿಖಾನ್, ಕೆಪಿಸಿಸಿ ಸದಸ್ಯ ವೈಎಚ್ ನಾಗರಾಜ್ ಹೊನ್ನುಡಿ ಕನ್ನಡ ವೇದಿಕೆಯ ತಾಲೂಕ ಅಧ್ಯಕ್ಷ ಷಣ್ಮುಖಯ್ಯ, ಪ್ರಾಂಶುಪಾಲ ಡಾ. ಹೆಚ್‌ಬಿ ಗಣಪತಿ, ಸಾಹಿತಿ ಕೆ ಪಿ ದೇವೇಂದ್ರಯ್ಯ, ಸಂಗನಾಳ ಮಠ, ಹೊನ್ನುಡಿ ಕನ್ನಡ ವೇದಿಕೆ ಉಪಾಧ್ಯಕ್ಷ ರುದ್ರಪ್ಪ, ರೇವಣಪ್ಪ, ಡಾ. ಪ್ರತಿಮಾ ನಿಜಗುಣ ಶಿವಯೋಗಿ, ರಾಮಾಚಾರಿ ಅಬೀಬುಲ್ಲಾ ಮೊದಲಾದವರು ಉಪಸ್ಥಿತರಿದ್ದರು.