ನ್ಯಾಮತಿ: ತಾಲೂಕಿನ ದೊಡ್ಡೇತ್ತಿನಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸೊಸೈಟಿ ವತಿಯಿಂದ ದಾವಣಗೆರೆ ಜಿಲ್ಲಾ ಡಿಸಿಸಿ ಬ್ಯಾಂಕಿನ ನಿರ್ದೇಶಕ ಡಿ ಜಿ ವಿಶ್ವನಾಥ್ ರವರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.
ಅಭಿನಂದನೆ ಮತ್ತು ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿದ ಡಿಜಿ ವಿಶ್ವನಾಥರವರು ನಾನುಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು ಸಹ ಸಹಕಾರಿ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ ನ್ಯಾಮತಿ ತಾಲೂಕಿನ ಸಹಕಾರಿ ಕ್ಷೇತ್ರದ ನಿರ್ದೇಶಕರುಗಳು ನನ್ನನ್ನು ಗೆಲ್ಲಿಸಿ ಈ ಸ್ಥಾನಕ್ಕೆ ತಂದಿದ್ದಾರೆ. ಅವರಿಗೆ ಮೊದಲನೇದಾಗಿ ಹೃತ್ಪೂರ್ವಕವಾದ ಧನ್ಯವಾದಗಳು ತಿಳಿಸುತ್ತೇನೆ ಎಂದರು. ಈ ವರ್ಷವೂ ಮಳೆ ಬಾರದೆ ರೈತರು ಕಂಗಲಾಗಿದ್ದಾರೆ ಅವರ ಜೀವನ ಆರ್ಥಿಕವಾಗಿ ಸಬಲರಾಗಬೇಕಾದರೆ ಕೃಷಿ ಸಾಲ ಮತ್ತು ಎಂ ಟಿ ಸಿ ಸಾಲ ಕಡಿಮೆ ದರದಲ್ಲಿ ಸಾಲವನ್ನು ಕೊಡಿಸಿ ಅವರ ಶ್ರೇಯೋಭಿವೃದ್ಧಿಗೆ ದುಡಿಯುತ್ತೇನೆ ಎಂದು ತಿಳಿಸಿದರು. ನನ್ನ ಕ್ಷೇತ್ರದ ಪ್ರತಿಯೊಂದು ಸೊಸೈಟಿಯಲ್ಲಿ ರೈತರು ಯಶಸ್ವಿನಿ ಯೋಜನೆ ಅಡಿಯಲ್ಲಿ ಹಣ ಪಾವತಿಸಿದ ರೈತರಿಗೆ ಕಿಡ್ನಿ, ಕ್ಯಾನ್ಸರ್ ,ಹೃದಯ ಶಸ್ತ್ರಚಿಕಿತ್ಸೆ, ಇನ್ನು ಮುಂತಾದ ಕಾಯಿಲೆಗಳಿಗೆ ಸರ್ಕಾರ ನಿಗದಿ ಮಾಡಿದ ಆಸ್ಪತ್ರೆಗಳ ಹೆಸರನ್ನು ಪ್ರತಿಯೊಂದು ಸೊಸೈಟಿಯಲ್ಲಿ ನಾಮಫಲಕವನ್ನು ಆಕಬೇಕು ಎಂದು ಡಿಸಿಸಿ ಬ್ಯಾಂಕಿನ ಸುಪರ್ವೈಸರ್ ಅವರಿಗೆ ಆದೇಶಿಸಿದರು. ಅಧ್ಯಕ್ಷರಾದ ದಾನೇಶಪ್ಪ, ಉಪಾಧ್ಯಕ್ಷರಾದ ಟಿ ಹನುಮಂತಪ್ಪ, ನಿರ್ದೇಶಕರುಗಳಾದ ರುದ್ರೇಶಪ್ಪ, ಎ,ಕೆ ನಾಗೇಂದ್ರಪ್ಪ, ಎಸ್ ರುದ್ರಪ್ಪ, ಎಂ ಮಹೇಶ್ವರಪ್ಪ, ಮಮತಾ, ಚೆನ್ನಮ್ಮ, ಯೋಗೇಶ್ ಡಿ,ಬಿ, ಶಶಿಧರ್ ಡಿ, ಸೂಪರ್ವೈಸರ್ ಸುರೇಶ್, ಮುಖ್ಯ ಕಾರ್ಯನಿರ್ವಣಾಧಿಕಾರಿ ಯೋಗೇಶ್, ನವೀನ್ ಸಹ ಇದ್ದರು.

Leave a Reply

Your email address will not be published. Required fields are marked *