ನ್ಯಾಮತಿ: ತಾಲೂಕು ಬೆಳಗುತ್ತಿ ಮಲ್ಲಿಗೆನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾರದಾಪೂಜೆ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ಎಸ್‍ಡಿಎಂಸಿ ಅಧ್ಯಕ್ಷ ಪರಮೇಶ್ವರಪ್ಪ ವಹಿಸಿದ್ದರು. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಅವರು ಮಾರ್ಚನಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಮಟ್ಟವನ್ನ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತಮ ರೀತಿಯಲ್ಲಿ ಉತ್ತರ ಬರೆದಾಗ ಅತಿ ಹೆಚ್ಚು ಅಂಕ ಗಳಿಸಿದರೆ ಮುಂದಿನ ಶಿಕ್ಷಣಕ್ಕೆ ನಾಂದಿಯಾಗುತ್ತದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು, ಪಾಠ ಮಾಡಿದ ಗುರುಗಳಿಗೆ, ತಂದೆ-ತಾಯಿಯರಿಗೆ, ಶಾಲೆಗೆ ಹೆಸರು ತಂದು ಕೊಡುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಿಕ್ಷಕರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಬೋಧನೆ ಮಾಡಿಸಲಾಯಿತು. ಹಿಂದಿನ ವರ್ಷ 10ನೇ ತರಗತಿಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮುಖ್ಯೋಪಾಧ್ಯಾಯ ತೀರ್ಥಲಿಂಗಪ್ಪ ಸಿ, ಎಸ್ ಡಿ.ಎಂ.ಸಿಸದಸ್ಯರುಗಳು ಹಾಗೂ ಶಿಕ್ಷಕರಾದ ಸೋಮಶೇಖರ್ ಎಸ,ಶಿವಕುಮಾರ್ ವೈ, ವಿಶ್ವನಾಥ್, ಯೋಗೇಶ್, ಚೆನ್ನಮ್ಮಲ್ಲಿಕಾರ್ಜುನ ಜಿಎಂ, ಬಸವರಾಜ್, ಕೋಮಲ, ಸುನಿತಾ, ಗೀತಾ, ಶ್ರುತಿ, ನೀಲಮ್ಮ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.