ದಾವಣಗೆರೆ : ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ಅವರು ಶುಕ್ರವಾರ ಬೆಳಗ್ಗೆ 9 ಗಂಟೆಯಿಂದಚನ್ನಗಿರಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನೇತೃತ್ವದಲ್ಲಿ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 9 ಕ್ಕೆ ದೊಡ್ಡಣ್ಣಗೆರೆ, ಚಿಕ್ಕಣ್ಣಗೆರೆ, ಎಸ್.ಬಿ.ಆರ್ ಕಾಲೋನಿ, 9.30 ಕ್ಕೆ ಕಸ್ತೂರಿ ಬಾ ನಗರ, 9.45 ಕ್ಕೆ ಸಿದ್ಧನಮಠ,10.15 ಕ್ಕೆ ಯಕ್ಕೆಗೊಂದಿ, ಕೊಮ್ಮಾರನಹಳ್ಳಿ, 10.45 ಕ್ಕೆ ತೊಪೇನಳ್ಳಿ, ಕಲ್ಲೇನಹಳ್ಳಿ, 11 ಕ್ಕೆ ಮೇದಿಕೆರೆ, 11.30ಕ್ಕೆ ಮಂಗೇನಹಳ್ಳಿ,12ಕ್ಕೆ ಮರಡಿ, 12.30 ಕ್ಕೆ ಉಪನಾಯಕನಹಳ್ಳಿ, ಮಧ್ಯಾಹ್ನ 1ಕ್ಕೆ ತಣಿಗೆರೆ, 1.30ಕ್ಕೆ ಭೀಮನೆರೆ, 2 ಕ್ಕೆ ಬೆಳ್ಳಿಗನೂಡು, 3ಕ್ಕೆ ಚಿಕ್ಕಕೊಗಲೂರು, 3.30 ಕ್ಕೆ ಮಲ್ಲಾಪುರ, ಮಲ್ಲಾಪುರ ಗೋಮಾಳ, 4 ಕ್ಕೆ ಅಲೂರು, 4.30 ಕ್ಕೆ ಹಿರೇಕೊಗಲೂರು, 5ಕ್ಕೆ ಗಿರಿಯಾಪುರ, 5.30ಕ್ಕೆ ಈರಗನಹಳ್ಳಿ, 6 ಕ್ಕೆ ವೆಂಕಟೇಶ್ವರಕ್ಯಾಂಪ್, 6.30ಕ್ಕೆ ಕೆಂಚನಹಳ್ಳಿ ಗ್ರಾಮಗಳಲ್ಲಿ ಪ್ರಚಾರ ಹಮ್ಮಿಕೊಂಡಿದ್ದು, ಬಿಜೆಪಿ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ಮಂಡಲ ಅಧ್ಯಕ್ಷರು, ವಿವಿಧ ಹಂತದ ಮುಖಂಡರು ಸಾಥ್ ನೀಡಲಿದ್ದಾರೆ.. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿ ಕೋರಲಾಗಿದೆ…
