ನ್ಯಾಮತಿ:ತಾಲ್ಲೂಕಿನ ಶಿವಮೊಗ್ಗ-ಶಿಕಾರಿಪುರ ರಸ್ತೆಯಚಿನ್ನಿಕಟ್ಟೆ ಬಳಿ ಕೆಎಸ್‍ಆರ್‍ಟಿಸಿ ವಾಯುವ್ಯ ಸಾರಿಗೆ ಬಸ್ ಹಾಗೂ ಒಮಿನಿ ಕಾರು ಪರಸ್ಪರಡಿಕ್ಕಿಯಾಗಿ ಒಮಿನಿ ಕಾರಿನಲ್ಲಿದ್ದ ಹರಮಘಟ್ಟ ನಂಜುಂಡಪ್ಪ(83), ಚಾಲಕ ದೇವರಾಜ ಹರಮಘಟ್ಟ(27), ರಾಖೇಶ ಸೂರಗೊಂಡನಕೊಪ್ಪ(30) ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ.
ವಿವರ: ಹರಮಘಟ್ಟದಿಂದ ಸವಳಂಗ ಮಾರ್ಗವಾಗಿ ಶಿಕಾರಿಪುರ ಹೋಗುತ್ತಿದ್ದ ಒಮಿನಿ ಕಾರು ಮತ್ತು ಶಿಕಾರಿಪುರದಿಂದ ಶಿವಮೊಗ್ಗ ಕಡೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ವಾಯುವ್ಯ ಸಾರಿಗೆ ಬಸ್ ಪರಸ್ಪರಡಿಕ್ಕಿಯಾದರಭಸಕ್ಕೆಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.ಬಸ್ ಪಕ್ಕದತಡೆಗೋಡೆಗೆಗುದ್ದಿಗೊಂಡು ನಿಂತಿದೆ.
ಒಮಿನಿಯಲ್ಲಿದ್ದ ಪ್ರಕಾಶಅವರ ಕಾಲಿಗೆ ಬಲವಾಗಿ ಪೆಟ್ಟು ಬಿದ್ದಿದೆ.ಆತನ ಪತ್ನಿ ವೀಣಾ ಮತ್ತು ಮಗ ರಂಜಿತಅವರಿಗೆ ಹಾಗೂ ಬಸ್‍ನಲ್ಲಿದ್ದ ಕೆಲವು ಪ್ರಯಾಣಿಕರಿಗೆಗಾಯವಾಗಿದ್ದು, ಚಿಕಿತ್ಸೆಗಾಗಿಆಸ್ಪತ್ರೆಗೆದಾಖಲಿಸಲಾಗಿದೆ.
ಸ್ಥಳಕ್ಕೆ ಅಡಿಷನಲ್ ಎಸ್ಪಿ ಕೆ.ಎನ್.ಮಂಜುನಾಥ, ಚನ್ನಗಿರಿ ಡಿವೈಎಸ್ಪಿ ಪ್ರಶಾಂತ ಮುನ್ನೊಳಿ, ನ್ಯಾಮತಿ ಪೊಲೀಸ್‍ಇನ್ಸ್‍ಪೆಕ್ಟರ್‍ಎನ್.ಎಸ್.ರವಿ ಮತ್ತು ಸಿಬ್ಬಂದಿಯವರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.