ನ್ಯಾಮತಿ:ತಾಲೂಕು ಗೋವಿನಕೋವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಲೀಲಾ ಸಿ ಮುಖ್ಯೋಪಾಧ್ಯಾಯರಾಗಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಅವರು ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಗ್ರಾಮಸ್ಥರು ಸೇರಿದಂತೆ ಅವರಿಗೆ ಬೀಳ್ಕೊಡುಗೆ ಮತ್ತು ಅಭಿನಂದನೆ ಸಲ್ಲಿಸಿದರು. ಶಿಕ್ಷಕರಾದ ರಮೇಶ್, ಹರೀಶ್, ಶಂಕರ್, ವೀಣಾ, ಗೌರಮ್ಮ, ಶೋಭಾ ಬಣಕಾರ್, ಎಸ್ ಡಿ ಎಮ್ ಸಿ ಅಧ್ಯಕ್ಷ ಕರಬಸಪ್ಪ ಆಚಾರಿ, ವಿ ಎಚ್ ರುದ್ರೇಶ್, ದಾದಾಪೀರ್, ಎಚ್ ಸುರೇಶ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶಶಿಕಲಾ ನಟರಾಜ್ ನಿವೃತ್ತಿ ಶಿಕ್ಷಕ ಕೆ ಜಿನೇಹಳ್ಳಿ, ಶ್ರೀಧರ್, ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.