ನ್ಯಾಮತಿ:ಗ್ರಾಮೀಣ ಪ್ರದೇಶಗಳ ಪೋಷಕರಲ್ಲಿ ಆಂಗ್ಲ ವ್ಯಾಮೋಹ ಹೆಚ್ಚಾಗುತ್ತಿರುವುದರಿಂದ, ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಾನಪದ ಕಲಾವಿದ ಸೋಗಿಲು ಎಸ್.ಪಿ.ಚಂದ್ರಶೇಖರಪ್ಪಗೌಡ ಆತಂಕ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ನ್ಯಾಮತಿ ತಾಲ್ಲೂಕು ಘಟಕದಿಂದ ಶನಿವಾರ ನಡೆದ 5ನೇ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಸಾಹಿತ್ಯ ಸೌರಭಕಾರ್ಯಕ್ರಮದಿಂದ ಸ್ಥಳೀಯ ಪ್ರತಿಭೆಗಳು ಹೊರತರಲುಅವಕಾಶವಾಗುತ್ತದೆಎಂದರು.
ನಾಟಿ ವೈದ್ಯಚೀಲೂರು ಪುರುವಂತರ ಪರಮೇಶ್ವರಪ್ಪ, ಪ್ರಕೃತಿಯಲ್ಲಿ ಸಿಗುವ ವಿವಿಧ ಸಸ್ಯಗಳು ಆರೋಗ್ಯರಕ್ಷಣೆಗೆ ಹೇಗೆ ಸಹಾಯವಾಗುತ್ತವೆ ಎಂಬುದನ್ನುಮನೆ ಮದ್ದುಪ್ರ್ಯಾತಕ್ಷಿಕೆ ಮೂಲಕ ಪರಿಚಯಿಸಿ, ಆಸಕ್ತರೊಂದಿಗೆ ಸಂವಾದ ನಡೆಸಿದರು.
ಭಜನೆಕಲಿಯುವರೀತಿ, ಅದರಿಂದ ಆಗುವ ಉಪಯೋಗ ಕುರಿತು ಭಜನೆ ಹಾಡುಗಳನ್ನು ಸುರಹೊನ್ನೆ ಗ್ರಾಮದ ಬಸವೇಶ್ವರ ಭಜನಾ ಸಂಘದ ಮೀನಾಕ್ಷಿ ತಿಳಿಸಿದರು.
ರಾಮೇಶ್ವರಯುವರೈತ ನಾಗರಾಜ ಅವರು ಕೃಷಿಯ ವಿವಿಧ ಪ್ರಾಕರಗಳ ಬಗ್ಗೆ ತಿಳಿಸಿದರು.ಕವಿತಾ ಬಳಿಗಾರ ರಾಮಾಯಣದ ಊರ್ಮಿಳೆಯ ಬಗ್ಗೆ ಮಾಹಿತಿ ನೀಡಿದರು. ಪಶು ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ಜಾನುವಾರು ಅಧಿಕಾರಿ ಎ.ನಾಗರಾಜಪ್ಪ ಮಾಹಿತಿ ನೀಡಿದರು. ಕೆ.ಟಿ.ಸತ್ಯನಾರಾಯಣ, ಸಾಹಿತಿ ನಾಗರಾಜಪ್ಪ ಅರ್ಕಚಾರ್, ಆರುಂಡಿ ಮಂಜಪ್ಪ, ಪುಷ್ಪಾ, ಕದಳಿ ಸಂಘದ ಅಧ್ಯಕ್ಷೆ ಅಂಬಿಕಾ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಕೆ.ಬೋಜರಾಜ, ನವೀನ, ಆಚೆಮನೆ ತಿಪ್ಪೇಸ್ವಾಮಿ, ಬಿ.ಜಿ.ಚೈತ್ರಾ, ಜಿ.ನಿಜಲಿಂಗಪ್ಪ ಸೊಂಡೂರು ಮಹೇಶ್ವರಪ್ಪ, ಎಂ.ಬಿ.ಶಿವಯೋಗಿ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಗೌರವ ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಎಂ.ಎಸ್.ಜಗಧೀಶ ಮತ್ತು ಈ ಸುಮಾಲತಾ, ಸುರೇಶಬಾಬು ಸೊಂಡೂರು, ಆರುಂಡಿ ಕರಿಗೌಡರ ನಾಗರಾಜಪ್ಪ, ರೇಖಾಗ ಜಾನನ, ಕುಮಾರ ಸೂರಜ್ ಉಪಸ್ಥಿತರಿದ್ದರು.