ನ್ಯಾಮತಿ ಕೇಂದ್ರ ಸರ್ಕಾರ ತನ್ನ ಬಜೆಟ್ನಲ್ಲಿ ಜನ ಸಾಮನ್ಯರಿಗೆ ಮಾರಕ ಖಾಯಿಲೆಗಳು ಬಂದರೆ ಅಂತಹ ರೋಗಿಗಳಿಗೆ ಕೈಗೆಟುಕುವ ರೀತಿಯಲ್ಲಿ ಔಷಧಿಗಳ ಬೆಲೆಯನ್ನು ಇಳಿಸಿದ್ದಾರೆ,ರೈತರಿಗೆ ಉತ್ತೇಜನ ನೀಡಲು ತೋಟಗಾರಿಕೆ,ಕರಾವಳಿ ಬೆಳೆಗಳಿಗೆ,ತೆಂಗಿಗೆ ಹಾಗೂ ಇತರ ಬೆಳೆಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ರೈತರಿಗೆ ತಮ್ಮ ಬಜೆಟ್ನಲ್ಲಿ ಹಣ ಮೀಸಲಿಟ್ಟಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಸೋಮವಾರ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ವಿಬಿ,ಜಿ.ರಾಮ್ಜಿ ಬಗೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಬಗ್ಗೆ ಮಾತನಾಡಿದರು.
ಸರ್ವರಿಗೂ ಸಮಪಾಲು ನೀಡುವ ದೃಷ್ಟಿಯಿಂದ ಈ ಜನಪ್ರಿಯ ಬಜೆಟ್ನ್ನು ಅರ್ಥ ಸಚಿವೆ ನಿರ್ಮಲ ಸೀತರಾಮನ್ ಮಂಡಿಸಿದ್ದಾರೆ.ಇದನ್ನು ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ ಸರ್ಕಾರ ಕೇಂದ್ರದ ಬಜೆಟ್ನ್ನು ಟೀಕಿಸುತ್ತಿದೆ, ರಾಜಕೀಯ ಕಾರಣಕ್ಕಾಗಿ ಬಜೆಟ್ನ್ನು ಟೀಕಿಸದೆ,ಒಮ್ಮೆ ಬಜೆಟ್ ಬಗೆ ಪೂರ್ಣ ತಿಳಿದುಕೊಂಡು ಹೇಳಿಕೆಗಳನ್ನು ನೀಡಿ ಎಂದರು.
ಶಿಕ್ಷಣ,ಹೆದ್ದಾರೆ,ಹೈಸ್ಪೀಡ್ ರೈಲ್ವೆ,ಮಹಿಳೆಯರಿಗೆ ಶೀ ಮಾರ್ಟ್,ಕ್ಯಾನ್ಸರ್ ಔಷಧ ಗಣನಿಯವಾಗಿ ಇಳಿಕೆ ಹೀಗೆ ಎಲ್ಲಾ ವರ್ಗಕ್ಕೂ ಬಜೆಟ್ನಲ್ಲಿ ಮಾನ್ಯತೆ ನೀಡಲಾಗಿದೆ ಎಂದ ಅವರು ಈ ಬಜೆಟ್ ಸರ್ವಸ್ಪರ್ಶಿ ಬಜೆಟ್ ಆಗಿದೆ ಎಂದರು.
ವಿಬಿ.ಜಿ.ರಾಮ್ಜಿ ಬಗ್ಗೆ ಟೀಕಿಸಿ ಗಾಂಧಿಜಿ ಹೆಸರನ್ನು ಕೈ ಬಿಟ್ಟಿದ್ದಾರೆ ಎನ್ನುವ ಕಾಂಗ್ರೆಸ್ ಸರ್ಕಾರ ಬೆಂಗಳುರು ಮಹಾನಗರ ಪಾಲಿಕೆಯಲ್ಲಿ ಗಾಂಧಿನಗರ ಇದ್ದ ಹೆಸರನ್ನು ನೇಹರು ನಗರ ಎಂದು ಬದಲಾಯಿಸಿರುವುದು ಸರಿಯೇ ಎಂದು ಪ್ರಶ್ನಿಸಿದರು. ಗಾಂಧಿಜಿ ಹೆಸರಿಗೆ ನಮ್ಮ ವಿರೋಧ ಇಲ್ಲ ಎಂದರು.
ನೇಹರು, ಇಂದಿರಾ ಗಾಂಧಿ,ರಾಜಿವ್ಗಾAಧಿ ಹಾಗೂ ಸಂಜಯ್ಗಾAಧಿ ಹೆಸರಿಡುವಾಗ ಗಾಂಧೀಜಿಯವರ ಹೆಸರು ಇವರಿಗೆ ನೆನಪು ಬರಲಿಲ್ಲ,ಈಗ ವಿಬಿ-ಜಿ.ರಾಮ್ಜಿ ಹೆಸರು ಇಟ್ಟಾಗ ಇವರಿಗೆ ಗಾಂಧೀಜಿ ನೆನಪಾಗುತ್ತಾರೆ ಎಂದು ಲೇವಡಿ ಮಾಡಿದರು.ಗಾಂಧೀಜಿಯವರ ಆದರ್ಶಗಳನ್ನು ನೀವು ಮೈಗೂಡಿಸಿಕೊಂಡಿದ್ದರೆ,ಬಡವರ ಬದುಕು ಹಸನು ಮಾಡಿ,ಎಲ್ಲೆಲ್ಲಿ ಸ್ಟೇಡಿಯಂಗಳು,ವಿಶ್ವವಿಧ್ಯಾನಿಲಯ,ಇAದಿರಾ ಕ್ಯಾಂಟಿನ್ಗಳಿಗೆ ಗಾಂಧೀಜಿ ಹೆಸರಿಡಿ ಅದಕ್ಕೆ ನಮ್ಮ ವಿರೋಧ ಇಲ್ಲ ಎಂದ ಅವರು, ಇಂದಿರಾಗಾAಧಿ ಕುಟುಂಬಕ್ಕೆ ನಿಯತ್ತಾಗಿರಲು ಅವರ ಹೆಸರುಗಳನ್ನು ಇಟ್ಟಿದ್ದಿರಿ ಎಂದು ಕಿಡಿ ಕಾರಿದರು.
ನಮಗೆ ಹಾಗೂ ದೇಶದ ಜನತೆಗೆ ಗಾಂಧೀಜಿ ಬಗ್ಗೆ ಅಪಾರವಾದ ಭಕ್ತಿ ಇದೆ, ಮೊದಲು ನೀವು ಗಾಂಧೀಜಿ ಬಗ್ಗೆ ಹೆಚ್ಚು ಗೌರವ ಬೆಳಸಿಕೊಳ್ಳಿ,ಸುಖಾ ಸುಮ್ಮನೆ ಬಿಜೆಪಿಯವರಿಗೆ ಗಾಂಧೀಜಿ ಬಗ್ಗೆ ಗೌರವ ಇಲ್ಲ ಎಂದು ಸುಳ್ಳು ಹೇಳಬೇಡಿ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್,ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್,ತಾ.ಪಂ. ಮಾಜಿ ಉಪಾಧ್ಯಕ್ಷ ಶಿವಾನಂದ್ ಹಾಗೂ ಇತರರು ಇದ್ದರು.
