ಇನ್ಸ್‌ಪೆಕ್ಟರ್‌ ತೇಗು, ಸಬ್-ಇನ್ಸ್‌ಪೆಕ್ಟರ್‌ಗಳಾದ ಬಾಲಕೃಷ್ಣನ್, ರಘು ಗಣೇಶ್, ಮತ್ತು ಇತರ 6 ಪೊಲೀಸ್ ಸಿಬ್ಬಂದಿಗಳಾದ ಮುರುಗನ್, ಸಾಮದುರೈ, ಮುತ್ತುರಾಜ್, ಚೆಲ್ಲದುರೈ, ಥಾಮಸ್ ಫ್ರಾನ್ಸಿಸ್, ವೇಯಿಲ್ ಮುತ್ತು ಪೊಲೀಸರ ನಡೆಯನ್ನು ತೀವ್ರವಾಗಿ ಖಂಡಿಸಿ, “ಬೇಲಿಯೇ ಎದ್ದು ಹೊಲ ಮೇಯ್ದಂತೆ ರಕ್ಷಣೆ ನೀಡಬೇಕಾದವರೇ ಇಂತಹ ಕ್ರೌರ್ಯ ಎಸಗಿದ್ದಾರೆ” ಎಂದರು. ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಜೈಲಿನಲ್ಲಿ ಅಮಾನವೀಯವಾಗಿ ನಡೆಸಿಕೊಂಡಿರುವುದು ಕ್ಷಮಾರ್ಹವಲ್ಲ. ಇವರಿಗೆ ಕೇವಲ ಜೀವಾವಧಿ ಶಿಕ್ಷೆ ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಮತ್ತು ಪೊಲೀಸರಲ್ಲಿ ಭಯ ಇರುವುದಿಲ್ಲ. ಆದ್ದರಿಂದ ಎಲ್ಲಾ ಒಂಬತ್ತು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ತೀರ್ಪು ನೀಡಿದರು.

ಇದರೊಂದಿಗೆ, ದೋಷಿಯಾಗಿರುವ ಪೊಲೀಸರು ಮೃತರ ಕುಟುಂಬಕ್ಕೆ ಒಟ್ಟು ₹1.40 ಕೋಟಿ ಪರಿಹಾರ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.

ತಂದೆ ಮತ್ತು ಮಗನನ್ನು ಹೊಡೆದು ಕೊಂದಿದ್ದ #ಪೋಲೀಸ್ ಅಧಿಕಾರಿಗಳು ಜೈಲು ಪಾಲು.

2020 ರಲ್ಲಿ ತೂತುಕುಡಿ ಜಿಲ್ಲೆಯ ಸಾಥನ್‌ಕುಲಂನಲ್ಲಿ ವ್ಯಕ್ತಿ ಮತ್ತು ಆತನ ಮಗನನ್ನು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮಧುರೈ ನ್ಯಾಯಾಲಯವು ಎಲ್ಲಾ ಒಂಬತ್ತು ಆರೋಪಿ ಪೊಲೀಸರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿ ಎಲ್ಲರಿಗೂ ಮರಣದಂಡನೆ ವಿಧಿಸಿದೆ.

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನ್‌ಕುಲಂ ಪೊಲೀಸ್ ಠಾಣೆಯಲ್ಲಿ ಆದ ಘಟನೆ, ಪ್ರಕರಣ ಹಿನ್ನಲೆ

COVID-19 #ಲಾಕ್‌ಡೌನ್ ನಿಯಮ ಉಲ್ಲಂಘನೆ ಆರೋಪದಲ್ಲಿ ಜೈರಾಜ್ (P. Jeyaraj) ಮತ್ತು ಅವರ ಮಗ ಬೆನ್ನಿಕ್ಸ್ (J. Bennix)ಬಂಧಿಸಿ ಕಸ್ಟಡಿಯಲ್ಲಿ #ಇನ್ಸ್‌ಪೆಕ್ಟರ್ ಎಸ್ ಶ್ರೀಧರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಕೆ ಬಾಲಕೃಷ್ಣನ್, ಪಿ ರಘುಗಣೇಶ್, ಹೆಡ್ ಕಾನ್ಸ್‌ಟೇಬಲ್‌ಗಳಾದ ಎಸ್ ಮುರುಗನ್ ಮತ್ತು ಎ ಸಮಿದುರೈ ಸೇರಿದಂತೆ ಕ್ರೂರವಾಗಿ ಹಿಂಸಿಸಿ, ಅವರ ಸಾವಿಗೆ ಕಾರಣರಾದರು. #ಸಿಬಿಐ IPC sections 302 ಕೊ..ಲೆ, 201 ಸಾಕ್ಷ್ಯ ನಾಶ 342 ಅಕ್ರಮ ಬಂಧನ 120B ಕ್ರಿಮಿನಲ್ ಪಿತೂರಿ ಈ ಪ್ರಮುಖ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರ ವಿರುದ್ಧ Crime No. 312 of 2020 ಪ್ರಕರಣ ದಾಖಲಿಸಿತ್ತು.

ಇನ್ಸ್‌ಪೆಕ್ಟರ್ ಶ್ರೀಧರ್ ಅವರ ಆದೇಶದಂತೆ, ಪೊಲೀಸರು ತಂದೆ-ಮಗನ ಮೇಲೆ ಲಾಠಿಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದರು. ಜೂನ್ 19, 2020ರ ರಾತ್ರಿ ಸುಮಾರು 7:45 ರಿಂದ ಮಧ್ಯರಾತ್ರಿ 3 ಗಂಟೆಯವರೆಗೆ ಸತತವಾಗಿ ಈ ಹಲ್ಲೆ ನಡೆದಿದೆ ಎಂದು ಸಾಕ್ಷ್ಯಗಳು ಹೇಳಿವೆ. ಬೆನಿಕ್ಸ್ ಅವರ ದೇಹದ ಮೇಲೆ 18ಕ್ಕೂ ಹೆಚ್ಚು ಮತ್ತು ಜಯರಾಜ್ ಅವರ ದೇಹದ ಮೇಲೆ 20ಕ್ಕೂ ಹೆಚ್ಚು ಗಂಭೀರ ಗಾಯಗಳಾಗಿದ್ದವು.

ಈ ಪ್ರಕರಣದಲ್ಲಿ ಸೆಲ್ವರಾಣಿ (ಜಯರಾಜ್ ಅವರ ಪತ್ನಿ) ಮತ್ತು ಸಾತನ್‌ಕುಲಂ ಪೊಲೀಸ್ ಮಹಿಳಾ ಹೆಡ್ ಕಾನ್‌ಸ್ಟೆಬಲ್ ಆರ್. ರೇವತಿ ಸೇರಿದಂತೆ 105 ಸಾಕ್ಷಿಗಳಿದ್ದರು. ಜಯರಾಜ್ ಮತ್ತು ಬೆನಿಕ್ಸ್ ಸಾವಿನ ಕುರಿತಾದ ನ್ಯಾಯಾಂಗ ತನಿಖಾ ವರದಿಗಳನ್ನು ಒಳಗೊಂಡಂತೆ ಸುಮಾರು 116 ದಾಖಲೆಗಳನ್ನು ಗುರುತಿಸಲಾಯಿತು. ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಅಪರಾಧವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಬಗ್ಗೆಯೂ ಉಲ್ಲೇಖಿಸಲಾಗಿದೆ. ಠಾಣೆಯ ಗೋಡೆಗಳ ಮೇಲೆ ಮತ್ತು ನೆಲದ ಮೇಲಿದ್ದ ರಕ್ತದ ಕಲೆಗಳನ್ನು ಪೊಲೀಸರೇ ತೊಳೆದು ಸ್ವಚ್ಛಗೊಳಿಸಿದ್ದರು. Log ಪುಸ್ತಕಗಳಲ್ಲಿ ತಪ್ಪು ಮಾಹಿತಿ ದಾಖಲಿಸಲಾಗಿತ್ತು.ಜಯರಾಜ್ ಮತ್ತು ಬೆನಿಕ್ಸ್ ಅವರ ಬಟ್ಟೆಗಳನ್ನು ಬದಲಾಯಿಸಿ, ರಕ್ತಸಿಕ್ತ ಬಟ್ಟೆಗಳನ್ನು ಹೂತುಹಾಕಲು ಪ್ರಯತ್ನಿಸಲಾಗಿತ್ತು.

ಇದು 1993ರಲ್ಲಿ ತಮಿಳುನಾಡಿನ ಕುಡ್ಲೂರು ಜಿಲ್ಲೆಯಲ್ಲಿ ನಡೆದ ಪ್ರಕರಣ Irular ಜನಾಂಗದ ರಾಜಕಣ್ಣು ಕೊಲೆ ಪ್ರಕರಣ ನೆನಪಿಸುತ್ತದೆ.ಸ್ಥಳೀಯ ಪೊಲೀಸ್ ಠಾಣೆ ರಾಜಕಣ್ಣುವನ್ನು ಕಳ್ಳತನ ಆರೋಪದಲ್ಲಿ ಬಂಧಿಸುತ್ತದೆ. ಬಂಧನದ ನಂತರ, ರಾಜಕಣ್ಣು ಕಸ್ಟಡಿಯಲ್ಲಿ ಕಾಣೆಯಾಗುತ್ತಾನೆ. ಆತನ ಪತ್ನಿ ಸೆಂಗೇನಿ ತನ್ನ ಪತಿಯಿಗಾಗಿ ನ್ಯಾಯ ಪಡೆಯಲು ವಕೀಲ ಚಂದ್ರು ಅವರನ್ನು ಸಂಪರ್ಕಿಸುತ್ತಾಳೆ. ಪೋಲೀಸ್ ಅಧಿಕಾರಿಗಳು ಆತನನ್ನು ಹೊಡೆದು ಕೊಲೆ ಮಾಡಿ, ಹೆಣ ಬಿಸಾಕಿ ಬಂದಿರುತ್ತಾರೆ. ಈ ಪ್ರಕರಣದಲ್ಲಿ ವಕೀಲರಾದ ಚಂದ್ರುರವರು ಪೊಲೀಸ್ ದೌರ್ಜನ್ಯ ಮತ್ತು ಸುಳ್ಳು FIR ವಿರುದ್ಧ ಕಾನೂನು ಹೋರಾಟ ಆರಂಭಿಸುತ್ತಾರೆ. ಪ್ರಕರಣ ಹೊರಗೆ ತಂದು ಕೊಲೆ ಮಾಡಿದ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ ಕೊಡಿಸಿದ್ದರು. ಅದು ಸೂರ್ಯ ನಟನೆಯ ಜೈ ಭೀಮ್ ಚಲನಚಿತ್ರವಾಗಿ ಬಂದಿತು.
ಆದ್ದರಿಂದ ಅಮಾಯಕರ ಮೇಲೆ ಮತ್ತು ಹೋರಾಟಗಾರರ ಮೇಲೆ ದೌರ್ಜನ್ಯ ಎಸಗುವ ಕೆಲವು ಪೊಲೀಸ ಅಧಿಕಾರಿಗಳು ಈ ಪ್ರಕರಣಗಳನ್ನು ತಿಳಿದುಕೊಂಡಿರಲಿ.
ಆದ್ದರಿಂದ ಪೊಲೀಸರ ದೌರ್ಜನಕ್ಕೆ ಯಾರು ಭಯ ಪಡೆದುಕೊಳ್ಳುವುದು ಬೇಡ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಕಾನೂನಿನ ಪ್ರಕಾರ, ಪೊಲೀಸರ ಅಧಿಕಾರ ದುರುಪಯೋಗದ ವಿರುದ್ಧ ಕಟ್ಟುನಿಟ್ಟಿನ ನಿಬಂಧನೆಗಳಿವೆ.

1)​ಕಸ್ಟಡಿಯಲ್ ಸಾವು ಅಥವಾ ಅತ್ಯಾಚಾರ ನಡೆದರೆ, ಅಂತಹ ಪ್ರಕರಣಗಳಲ್ಲಿ ಕಡ್ಡಾಯವಾಗಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ತನಿಖೆ ನಡೆಯಬೇಕು.
2)​ಪೊಲೀಸರ ಅಕ್ರಮ ಬಂಧನ ಅಥವಾ ಹಿಂಸೆಯಿಂದ ತೊಂದರೆಗೊಳಗಾದ ವ್ಯಕ್ತಿಗೆ ಸರ್ಕಾರದಿಂದ ನಷ್ಟ ಪರಿಹಾರ ಕೊಡಿಸುವಂತೆ ನ್ಯಾಯಾಲಯವು ಆದೇಶಿಸಬಹುದು.
​ಡಿ.ಕೆ. ಬಸು (D.K. Basu vs. State of West Bengal)ಪ್ರಕರಣದ ಮಾರ್ಗಸೂಚಿಗಳನ್ನು ಅಥವಾ ಇತರ ಕಾನೂನು ನಿಯಮಗಳನ್ನು ಪೊಲೀಸರು ಉಲ್ಲಂಘಿಸಿದರೆ, ಅವರ ವಿರುದ್ಧ ಈ ಶಿಸ್ತುಕ್ರಮ ಮತ್ತು ಕಾನೂನು ಕ್ರಮಗಳನ್ನು ಜರುಗಿಸಬಹುದು.
ಆದ್ದರಿಂದ ಕೆಲವು ಪೊಲೀಸ್ ಠಾಣೆಗಳಲ್ಲಿ ಇಂತಹ ಕೆಲವು ದುಷ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಅನೇಕ ಹೋರಾಟಗಳನ್ನು ಮಾಡಿ ನ್ಯಾಯ ಕೊಡಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ.
www.krsparty.org ವೆಬ್ ಸೈಟ್ಗೆ ಭೇಟಿ ನೀಡಿ ಪಕ್ಷದ ಸದಸ್ಯರಾಗಿ.

ನ್ಯಾಯವಾದಿ ರವಿಕುಮಾರ್
ರಾಜ್ಯ ಸಂಘಟನಾ ಕಾರ್ಯದರ್ಶಿ ಕೆಆರ್‌ಎಸ್ ಪಕ್ಷ.

PoliceCustudy

Sathankulam_case, #Jayaraj_and_Bennixcase, #Sathankulam_verdict, #Tamil_Nadu_custodialdeath, #Police_brutality


​#SathankulamCase​ #JusticeForJayarajAndBennix​ #CustodialDeath​ #TamilNaduPolice​ #PoliceBrutality​ #LegalVerdict​ #SubramanyaHandige​ #KannadaNews​ #HumanRights​ #CBIInvestigation​ #TrendingNews​ #CrimeAnalysis​

ಕಳೆದ ವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರ ಲೈವ್ ನಲ್ಲಿ ಬಂದು ತಿಳಿಸಿಕೊಟ್ಟಿದ್ದೆ ಲಿಂಕ್ ನ್ನು ಹಾಕಿದ್ದೇನೆ ದಯವಿಟ್ಟು ಮತ್ತೊಮ್ಮೆ ನೋಡಿ.
https://www.facebook.com/share/v/1CphzPZMSN/

ನ್ಯಾಯವಾದಿ ರವಿಕುಮಾರ್
ರಾಜ್ಯ ಸಂಘಟನಾ ಕಾರ್ಯದರ್ಶಿ KRS ಪಕ್ಷ

@highlight DR. G Parameshwara #ipl2026 #police #YouthAwareness

Leave a Reply

Your email address will not be published. Required fields are marked *